ನ್ಯೂಸ್

ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್

ನವದೆಹಲಿ: ಸಂಸದ ರಾಹುಲ್​ ಗಾಂಧಿ ಮೊನ್ನೆಯಷ್ಟೇ ಸಂಸತ್ತಿನಲ್ಲಿ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು ಎಂಬ ಪ್ರಕರಣ ಇನ್ನೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಅಂದಿನಿಂದಲೂ ಚರ್ಚೆಯಲ್ಲಿರುವ ಈ ವಿಚಾರವಾಗಿ ಪರ-ವಿರೋಧ ಹೇಳಿಕೆಗಳು ಕೇಳಿ ಬರುತ್ತಲೇ ಇವೆ.

ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟರು ಎಂದು ಬಿಜೆಪಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ಸ್ಪೀಕರ್​ಗೆ ದೂರು ಕೂಡ ನೀಡಿದ್ದರು. ಇದು ಅಸಭ್ಯ ವರ್ತನೆ ಎಂದು ಆರೋಪಿಸಿದ್ದ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರೂ ವಾಗ್ದಾಳಿ ನಡೆಸಿದ್ದಾರೆ.

ಇದೀಗ ಇದೇ ವಿಚಾರವಾಗಿ ರಾಹುಲ್ ಗಾಂಧಿ ಪರವಾಗಿ ಮಹಿಳೆಯೊಬ್ಬರು ಮಾತನಾಡಿ ಬೆಂಬಲ ಸೂಚಿಸಿದ್ದಾರೆ. ರಾಹುಲ್ ಪರವಾಗಿ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ವಕ್ತಾರೆ ಸಾರಿಕಾ ಪಾಸ್ವಾನ್​ ಮಾತನಾಡಿದ್ದು, ಸ್ಮೃತಿ ಇರಾನಿಗೆ ಫ್ಲೈಯಿಂಗ್​ ಕಿಸ್ಸನ್ನು ಹಿಡಿಯಲು ಯಾರು ಹೇಳಿದ್ದರು? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ರಾಹುಲ್ ಗಾಂಧಿಯವರಿಗೆ ಹಾಲಿವುಡ್​-ಬಾಲಿವುಡ್​ನಿಂದ ಪ್ರಪೋಸಲ್ಸ್ ಬರುತ್ತಿದ್ದು, ಅವರು ಐವತ್ತು ವರ್ಷ ಪ್ರಾಯದ ಸ್ಮೃತಿ ಇರಾನಿಗೆ ಯಾಕೆ ಫ್ಲೈಯಿಂಗ್ ಕಿಸ್ ಕೊಡುತ್ತಾರೆ ಎಂದೂ ಸಾರಿಕಾ ಪಾಸ್ವಾನ್ ಪ್ರಶ್ನೆ ಮಾಡಿದ್ದಾರೆ.