ನ್ಯೂಸ್

ತೆಲುಗು ನಟಿಯೊಂದಿಗೆ ವಸಿಷ್ಠ ಸಿಂಹ ಲಿಪ್​ಲಾಕ್​: ಬೋಲ್ಡ್​ ವಿಡಿಯೋ ವೈರಲ್​..!

ಹೈದರಾಬಾದ್​: ನಟ ವಸಿಷ್ಠ ಸಿಂಹ ಅಭಿನಯದ ತೆಲುಗು ಚಿತ್ರ "ನಯೀಮ್​ ಡೈರೀಸ್​" ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಅದರ ಭಾಗವಾಗಿ ವಿಡಿಯೋ ಸಾಂಗ್​ ಒಂದು ಬಿಡುಗಡೆಯಾಗಿದೆ.

ನಯೀಮ್​ ಡೈರೀಸ್​ ಥ್ರಿಲ್ಲರ್​ ಸಿನಿಮಾ ಆಗಿದೆ. ವಸಿಷ್ಠ ಸಿಂಹ ಜತೆ ತೆಲುಗು ಬಿಗ್​ಬಾಸ್​ ಸೀಸನ್​ 4ರ ಸ್ಪರ್ಧಿ ದಿವಿ ವಡ್ತ್ಯಾ ತೆರೆ ಹಂಚಿಕೊಂಡಿದ್ದಾರೆ. ಬಿಡುಗಡೆಯಾಗಿರುವ ವಿಡಿಯೋದಲ್ಲಿ ವಸಿಷ್ಠ ಸಿಂಹ ಮತ್ತು ನಟಿ ದಿವಿ ತುಂಬಾ ಬೋಲ್ಡ್​ ಆಗಿ ನಟಿಸಿದ್ದಾರೆ. ಬೆಡ್​ರೂಮ್​ ಮತ್ತು ಲಿಪ್​ಲಾಕ್​ ದೃಶ್ಯ ತುಣುಕುಗಳಿದ್ದು, ಇಡೀ ಹಾಡು ರೊಮ್ಯಾಂಟಿಕ್​ ದೃಶ್ಯಗಳಿಂದ ತುಂಬಿದ್ದು, ವಿಡಿಯೋ ವೈರಲ್​ ಆಗುತ್ತಿದೆ.

ನಯೀಮ್​ ಡೈರೀಸ್​ ಚಿತ್ರದಲ್ಲಿ ಕನ್ನಡತಿ ಸಂಯುಕ್ತ ಹೊರನಾಡು ಮತ್ತು ಯಜ್ಞಾ ಶೆಟ್ಟಿ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ವರದರಾಜ್​ ಎಂಬುವರು ಬಂಡವಾಳ ಹೂಡಿದ್ದಾರೆ.

ದಿವಿ ಅವರು ಬಿಗ್​ಬಾಸ್ ಮನೆಗೆ ಕಾಲಿಡುವ ಮುನ್ನವೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ವೈಯಕ್ತಿಕ ಆಟದ ಬಗ್ಗೆ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಬಿಗ್​ಬಾಸ್​ನಲ್ಲಿ ಎಲ್ಲರ ಗಮನ ಸೆಳೆದರು. ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ ಸ್ಪರ್ಧಿಗಳಾದ ಗಂಗವ್ವ, ಅಮ್ಮ ರಾಜಶೇಖರ್ ಮತ್ತು ಇತರರಿಗೆ ತುಂಬಾ ಹತ್ತಿರವಾಗಿದ್ದರು. (ಏಜೆನ್ಸೀಸ್​)