More

    ಕೋರ್ಟ್​ ಆದೇಶಕ್ಕೂ ಕ್ಯಾರೆ ಎನ್ನದ ಗಂಡ: ಅನಾಥ ಮಹಿಳೆಯ ಕತೆ ಕೇಳಿದ್ರೆ ಮನಕಲಕುತ್ತೆ

    ಕೊಚ್ಚಿ: ಕೊರ್ಟ್​ ಆದೇಶದ ಹೊರತಾಗಿಯೂ ಗಂಡ ಮತ್ತು ಆತನ ಮನೆಯವರು ಮಹಿಳೆಯನ್ನು ಮನೆಗೆ ಸೇರಿಸದೇ ಆಕೆಯನ್ನು ಅಗ್ನಿಪರೀಕ್ಷೆಗೆ ದೂಡಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. 27 ವರ್ಷದ ಸಂತ್ರಸ್ತ ಮಹಿಳೆಯನ್ನು ಚಿಕ್ಕ ವಯಸ್ಸಿನಲ್ಲೇ ಪಾಲಕರು ತ್ಯಜಿಸಿದ್ದಾರೆ. ಅವಳನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಯು ಕೂಡ ಇಹಲೋಕ ತ್ಯಜಿಸಿದ್ದು, ಸದ್ಯ ಆಕೆಗೆ ಜೀವನದಲ್ಲಿ ಯಾರ ಬೆಂಬಲ ಇಲ್ಲವೂ ಇಲ್ಲ. ಹೀಗಾಗಿ ಬೀದಿಯಲ್ಲಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಬಳಿ ಮನವಿ ಮಾಡಿದರೂ ಕೂಡ ಮಧ್ಯಸ್ಥಿಕೆ ವಹಿಸಲು ನಿರಾಸಕ್ತಿ ತೋರುತ್ತಿದ್ದಾರೆಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ.

    ಸಂತ್ರಸ್ತೆಯು ಕೇರಳದ ಕಯಂಕುಲಂ ಮೂಲದವಳು. ಎರಡು ವರ್ಷದವಳಿದ್ದಾಗಲೇ ತಂದೆ-ತಾಯಿ ಆಕೆಯನ್ನು ಕೈಬಿಟ್ಟಿದ್ದಾರೆ. ಅಂದಿನಿಂದ ಆಕೆಯನ್ನು ಅಜ್ಜಿಯೆ ನೋಡಿಕೊಳ್ಳುತ್ತಿದ್ದರು. ಆದರೆ, ಅಜ್ಜಿ ನಿಧನರಾದ ಬಳಿಕ ಅಕ್ಷರಶಃ ಅನಾಥಳಾದಳು. 12 ತರಗತಿ ಮುಗಿಸಿದ ಬಳಿಕ ಮಹಿಳೆ ಕೆಲಸ ಹುಡುಕಿಕೊಂಡು ಕೊಚ್ಚಿಗೆ ತೆರಳಿದಳು. ಬಳಿಕ ಆನ್​ಲೈನ್​ ಡಿಲಿವರಿ ಕೆಲಸವನ್ನೂ ಗಿಟ್ಟಿಸಿಕೊಂಡಳು. ಆದರೆ, ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಆಕೆ ಕೆಲಸವನ್ನು ಕಳೆದುಕೊಂಡಳು.

    ಈ ಅನಿರೀಕ್ಷಿತ ಜೀವನ ಪಯಣದಲ್ಲಿ ಸಂತ್ರಸ್ತೆಗೆ ಒಸ್ವಿನ್​ ವಿಲಿಯಮ್​ ಕೊರಾಚ್​ ಎಂಬಾತನ ಪರಿಚಯವಾಗುತ್ತದೆ. ಸಂತ್ರಸ್ತೆ ಹೇಳಿಕೆ ಪ್ರಕಾರ ಆರಂಭದಲ್ಲಿ ತುಂಬಾ ಆಪ್ತನಾಗಿದ್ದ ಆತ ಡ್ರಗ್ಸ್​ ನೀಡಿ ಮತ್ತು ಬರಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿದ್ದಾಳೆ. ಬಳಿಕ ಈ ಸಂಬಂಧ ಪೊಲೀಸ್​ ಪ್ರಕರಣ ದಾಖಲಿಸಿದಾಗ ಆತ ಮದುವೆ ಆಗಲು ಒಪ್ಪಿಕೊಂಡಿದ್ದ. ಅದರಂತೆ ಕಳೆದ ವರ್ಷದ ರಿಜಿಸ್ಟರ್​ ಮದುವೆ ನಡೆದಿತ್ತು. ಎಡಥಲದ ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದರು. ಹೀಗೆ ಸಂಸಾರದ ಬಂಡಿ ಸಾಗುತ್ತಿತ್ತು. ಆದರೆ, ಮೊದಲೇ ಸಂಚು ರೂಪಿಸಿದ್ದ ಪತಿ, ಸಂತ್ರಸ್ತೆಯ ಉಳಿತಾಯ ಹಣ ಕಬಳಿಸಿದ್ದಲ್ಲದೆ, ಆಕೆಯ ಹೆಸರಿನಲ್ಲಿ ಲೋನ್​ ಪಡೆದು, ಲೈಂಗಿಕ ದೌರ್ಜನ್ಯದಿಂದಾಗಿ ಮಹಿಳೆಯ ಆರೋಗ್ಯ ಹದಗೆಡುತ್ತಿದ್ದ ಪರಿಸ್ಥಿತಿಯಲ್ಲಿ ಆಕೆಯನ್ನು ಒಂಟಿಯಾಗಿ ಬಿಟ್ಟು ಬಂದು ತನ್ನ ಮನೆ ಸೇರಿಕೊಂಡಿದ್ದಾನೆ.

    ಕಳೆದ ಸೆಪ್ಟೆಂಬರ್​ 23 ರಿಂದ ಆರೋಪಿ ಒಸ್ವಿನ್​ ಕಲೋರ್​ ಬ್ಯಾಂಕ್​ ರಸ್ತೆಯಲ್ಲಿ ತನ್ನ ಮನೆಯಲ್ಲಿ ಪಾಲಕರೊಂದಿಗೆ ಇದ್ದಾನೆ. ಈ ಸಂಬಂಧ ಮಹಿಳೆ ಪ್ರಕರಣ ದಾಖಲಿಸಿದಾಗ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶವೊಂದನ್ನು ಹೊರಡಿಸಿತು. ಆಕೆಯ ಗಂಡನ ಮನೆಗೆ ಹೋಗಲು ಅನುಮತಿಯನ್ನು ನೀಡಿತು. ಆದರೆ, ಪತಿಯ ಮನೆಗೆ ಹೋದರು ಕೂಡ ಆಕೆಯನ್ನು ಒಳಗೆ ಸೇರಿಸಲಿಲ್ಲ. ಇದಾದ ಬಳಿಕ ಸಂತ್ರಸ್ತೆ ಎರ್ನಾಕುಲಂನ ಉತ್ತರ ವಿಭಾಗದ ಪೊಲೀಸ್​ ಠಾಣೆಗೆ ಕೋರ್ಟ್​ ಆದೇಶದ ಜತೆಗೆ ಹೋಗಿದ್ದಾಳೆ. ಆದರೆ, ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪೊಲೀಸರು ಕೂಡ ನಿರಾಸಕ್ತಿಯನ್ನು ತೋರಿದ್ದಾರೆ.

    ಇದೇ ಸಂದರ್ಭದಲ್ಲಿ ಸಂತ್ರಸ್ತೆ ಎಡಥಲದ ಬಾಡಿಗೆ ಮನೆಯಲ್ಲಿ ಇರುವಾಗ ಬಾಡಿಕೆ ಪಾವತಿಸಿಲ್ಲ ಎಂದು ಆಕೆಯನ್ನು ಸೋಮವಾರದ ಒಳಗೆ ಮನೆ ಬಿಡುವಂತೆ ಹೇಳಿದ್ದಾರೆ. ಅಂದಿನಿಂದ ಆಕೆ ಗಂಡನ ಮನೆಯ ಟೆರೆಸ್​ ಮೇಲೆ ವಾಸವಿದ್ದಾಳೆ. ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಕೆಲಸ ಹುಡುಕಿಕೊಳ್ಳುವುದು ಕಷ್ಟಕರವಾಗಿದೆ. ಅಲ್ಲದೆ, ಊಟಕ್ಕೂ ಕೂಡ ಪರದಾಡುವಂತಾಗಿದೆ.

    ಮಂಗಳವಾರ ಬೆಳಗ್ಗೆ ಸಂತ್ರಸ್ತೆ ಶೌಚಾಲಯಕ್ಕಾಗಿ ಮನೆಯಿಂದ ಹೊರಬಂದಾಗ ಓಸ್ವಿನ್ ಕುಟುಂಬ ಸದಸ್ಯರು ಮನೆಯ ಗೇಟ್‌ಗೂ ಬೀಗ ಹಾಕಿದ್ದರು. ಆಕೆಯನ್ನು ಬೀದಿಯಲ್ಲಿ ಅಲೆಯಲು ಬಿಟ್ಟಿದ್ದಾರೆ. “ನಾನು ಆತ್ಮಹತ್ಯೆಯ ಅಂಚಿನಲ್ಲಿದ್ದೇನೆ. ಏನು ಮಾಡಬೇಕೆಂದು ಮತ್ತು ಎಲ್ಲಿಗೆ ಹೋಗಬೇಕೆಂದು ನನಗೆ ತಿಳಿದಿಲ್ಲ. ಸಾಲವನ್ನು ಮರುಪಾವತಿಸಲು ಕರೆಗಳು ಬರುತ್ತಿವೆ ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾಳೆ. (ಏಜೆನ್ಸೀಸ್​)

    ಊಟದಲ್ಲಿ ಪುರುಷರ ಗುಪ್ತಾಂಗದ ತುಂಡು ಕಂಡು ಬೆಚ್ಚಿಬಿದ್ದ ಮಹಿಳೆ! ವೈರಲ್​ ಆಯ್ತು ವಿಡಿಯೋ!

    VIDEO: ಮದುವೆಯ ಬೃಹದಾಕಾರದ ಕೇಕ್‌ ಕತ್ತರಿಸೋ ಮೊದಲೇ ಬಿದ್ದು ಚೆಲ್ಲಾಪಿಲ್ಲಿ! ಸಪ್ಲೈಯರ್‌ ಮಾಡಿದ್ದೇನು ನೋಡಿ…

    ಬ್ರಾಲೆಸ್​ ಫೋಟೋಶೂಟ್​: ಚಿತ್ರರಂಗ ಬಿಡುವಂತೆ ನಟಿ ಪಾಯಲ್​ ರಜಪೂತ್​ಗೆ ತಾಯಿಯ ತಾಕೀತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts