ನ್ಯೂಸ್

FTII ನೂತನ ಅಧ್ಯಕ್ಷರಾಗಿ ನಟ ಮಾಧವನ್​​ ಆಯ್ಕೆ

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ಆರ್​.ಮಾಧವನ್​ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII) ಅಧ್ಯಕ್ಷರಾಗಿ, ಆಡಳಿತ ಮಂಡಳಿ ಚೇರ್​ಮನ್​ ಆಗಿ ನಾಮನಿರ್ದೇಶನಗೊಂಡಿದ್ದಾರೆ.

ಈ ಕುರಿತು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಅವರು ಟ್ವೀಟ್​ ಮಾಡಿ ತಿಳಿಸಿದ್ದಾರೆ. ಇತ್ತೀಚಿಗೆ ಮಾಧವನ್​ ನಟನೆಯ ರಾಕೆಟ್ರಿ: ದಿ ನಂಬಿ ಎಫೆಕ್ಸ್​ ಚಿತ್ರಕ್ಕೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

FTIIನ ನೂತನ ಅಧ್ಯಕ್ಷ ಹಾಗೂ ಚೇರ್​ಮನ್​ ಆಗಿ ನಾಮನಿರ್ದೇಶನಗೊಂಡ ಮಾಧವನ್​ ಅವರಿಗೆ ಅಭಿನಂದನೆಗಳು. ನಿಮ್ಮ ಅನುಭವವು ಈ ಸಂಸ್ಥೆಯನ್ನು ಇನ್ನಷ್ಟು ಉತೃಕಷ್ಟಗೊಳಿಸಿ ಧನಾತ್ಮಕ ಬದಲಾವಣೆಗಳೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಾ ಎಂದು ನಮಗೆ ಖಾತ್ರಿಯಿದೆ. ನಿಮಗೆ ಶುಭಾಶಯಗಳು ಎಂದು ಸಚಿವ ಅನುರಾಗ್​ ಠಾಕೂರ್​ ಟ್ವೀಟ್​ ಮಾಡಿದ್ದಾರೆ.