R K SWAMY : ಪ್ರಮುಖ ಜಾಹೀರಾತು ಕಂಪನಿ ಬಿಬಿಡಿಎಂ ಜೊತೆಗಿನ 37 ವರ್ಷಗಳ ಪಾಲುದಾರಿಕೆಯನ್ನು ಕೊನೆಗೊಳಿಸಿದ ಮೂರು ವರ್ಷಗಳ ಬಳಿಕ ಮತ್ತು ಷೇರು ಮಾರುಕಟ್ಟೆಯಲ್ಲಿ ತನ್ನ ಚೊಚ್ಚಲ ಪ್ರವೇಶದ ಒಂದು ವರ್ಷದ ನಂತರ ಭಾರತದ ಅತ್ಯಂತ ಗೌರವಾನ್ವಿತ ಸಮಗ್ರ ಮಾರ್ಕೆಟಿಂಗ್ ಸಂಸ್ಥೆಗಳಲ್ಲಿ ಒಂದಾದ ಆರ್ ಕೆ ಸ್ವಾಮಿ ಲಿಮಿಟೆಡ್ ( R K SWAMY Ltd ) ಹೊಸ ಉದ್ಯಮವೊಂದನ್ನು ಹುಟ್ಟು ಹಾಕಿದೆ.
ಬ್ರಾಂಡ್ & ಮಾರ್ಕೆಟಿಂಗ್ ಕನ್ಸಲ್ಟಿಂಗ್ ಗ್ರೂಪ್ ( BMCG ) ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿರುವ ಆರ್ ಕೆ ಸ್ವಾಮಿ ಲಿಮಿಟೆಡ್, ಗ್ರಾಹಕರಿಗೆ ಸಲಹಾ ಸೇವೆಗಳನ್ನು ನೀಡಲಿದೆ. ಈ ಹೊಸ ಘಟಕವು ತನ್ನ ಗ್ರಾಹಕರಿಗೆ ಬ್ರ್ಯಾಂಡ್ ಮಾರ್ಕೆಟಿಂಗ್ ವ್ಯವಹಾರವನ್ನು ಸರಿಯಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ಗುರಿ ಹೊಂದಿದೆ. ಈ ಸೇವೆಯು ವಿಭಿನ್ನವಾಗಿದ್ದು, ಈ ಕಾಲಕ್ಕೆ ತುಂಬಾ ಪ್ರಸ್ತುತವಾಗಿರುತ್ತದೆ. ಈ ಕಂಪನಿ ಒಂದೇ ಸೂರಿನಡಿ ಬಹು ವಿಭಾಗಗಳನ್ನು ಸಂಯೋಜಿಸುವ ಮೂಲಕ ಬ್ರಾಂಡ್ ತಂತ್ರ, ಡಿಜಿಟಲ್ ಅನುಭವ, ಸಂವಹನ, ಡೇಟಾ ವಿಶ್ಲೇಷಣೆ ಮತ್ತು ಗ್ರಾಹಕ ಒಳನೋಟಗಳನ್ನು ನೀಡುತ್ತದೆ. ಕಂಪನಿಯು ಈ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಹೇರಳವಾಗಿ ಕೆಲಸ ಮಾಡಿದ್ದು, ಗ್ರಾಹಕರಿಗೆ ಮಾರುಕಟ್ಟೆಯ ಬಗ್ಗೆ ಉತ್ತಮ ಸಲಹೆಯನ್ನು ನೀಡಲಿದೆ.
ಕಳೆದ 52 ವರ್ಷಗಳಲ್ಲಿ, ವಿವಿಧ ವಲಯಗಳಲ್ಲಿರುವ ನಮ್ಮ ಗ್ರಾಹಕರು ನಮಗೆ ಬಹಳಷ್ಟು ಕಲಿಸಿದ್ದಾರೆ. ನಾವು ಪದೇ ಪದೇ ಕಷ್ಟಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಗ್ರಾಹಕರು ಯಶಸ್ವಿಯಾಗಲು ಸಹಾಯ ಮಾಡಿದ್ದೇವೆ. ನಾವು ನಿರ್ಮಿಸಲು ಬಯಸುವ ಪರಂಪರೆಯು ಕೂಡ ಇದೇ ಆಗಿದೆ ಎಂದು ಆರ್ ಕೆ ಸ್ವಾಮಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಗುಂಪಿನ ಅಧ್ಯಕ್ಷ ಶ್ರೀನಿವಾಸನ್ ಕೆ ಸ್ವಾಮಿ ಹೇಳಿದರು.
ಭಾರತೀಯ ಷೇರು ಮಾರುಕಟ್ಟೆಯಾದ ಬಿಎಸ್‌ಇ ಮತ್ತು ಎನ್‌ಎಸ್‌ಇಯ ಮುಖ್ಯ ಮಂಡಳಿಯಲ್ಲಿ ಪಟ್ಟಿ ಮಾಡಲಾದ ಏಕೈಕ ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಸರ್ವೀಸಸ್ ಗ್ರೂಪ್ ಇದಾಗಿದೆ. ನಾವು ಭಾರತೀಯ ಮಾರುಕಟ್ಟೆಯಲ್ಲಿ ಆಳವಾಗಿ ಬೇರೂರಿದ್ದೇವೆ. ಹೆಚ್ಚಿನ ಮಾರಾಟಗಾರರಿಗೆ ಭಾರತವು ವಿಶ್ವದ ಅತ್ಯಂತ ಸವಾಲಿನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ನಾವು ನಂಬುತ್ತೇವೆ. ಈ ವಿಚಾರದಲ್ಲಿ ನಮ್ಮ ಹೊಸ ಸಲಹಾ ಗುಂಪು, ಆಳವಾಗಿ ಹೋಗಿ ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯಲಿದೆ. ಇದು ನಮ್ಮ ಗ್ರಾಹಕರಿಗೆ ನಾವು ಕೊಡುವ ಖಾತರಿಯಾಗಿದೆ ಎಂದು ಆರ್ ಕೆ ಸ್ವಾಮಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಶೇಖರ್ ಸ್ವಾಮಿ ಹೇಳಿದರು.
ನಿರ್ದಿಷ್ಟ ಬ್ರ್ಯಾಂಡ್ ಮತ್ತು ಮಾರ್ಕೆಟಿಂಗ್ ಸನ್ನಿವೇಶಗಳನ್ನು ಪರಿಹರಿಸಲು ನಮ್ಮಲ್ಲಿ ನಿರ್ದಿಷ್ಟ ಪರಿಹಾರಗಳಿವೆ. ಹೊಸ ಮಾರುಕಟ್ಟೆಗಳು ಅಥವಾ ವಿಭಾಗಗಳನ್ನು ಪ್ರವೇಶಿಸುವುದು, ಸ್ಪರ್ಧಾತ್ಮಕ ಅಡೆತಡೆಗಳನ್ನು ಹೆಚ್ಚಿಸುವುದು, ಹೆಚ್ಚಿನ ಗ್ರಾಹಕರನ್ನು ಸಂಪಾದಿಸುವುದು, ಬ್ರ್ಯಾಂಡ್ ಅನ್ನು ನವೀಕರಿಸುವುದು, ಬ್ರ್ಯಾಂಡ್ ರೀತಿಯನ್ನು ಸ್ಪಷ್ಟಪಡಿಸುವುದು, ಬ್ರ್ಯಾಂಡ್ ಪ್ರೀಮಿಯಂ ಅನ್ನು ಸುಧಾರಿಸುವುದು, ಮಾರ್ಕೆಟಿಂಗ್ ವೆಚ್ಚವನ್ನು ಅತ್ಯುತ್ತಮವಾಗಿಸುವುದು ಅಥವಾ ಪೋರ್ಟ್ಫೋಲಿಯೊದ ವ್ಯಾಪ್ತಿಯನ್ನು ಹೆಚ್ಚಿಸುವುದು ಸೇರಿ ಈ ಎಲ್ಲಾ ಸಂದರ್ಭಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಪರಿಹರಿಸಬಹುದು ಎಂದು ಕನ್ಸಲ್ಟಿಂಗ್ ಗ್ರೂಪ್‌ನ ಸಿಇಒ ವಿ ವಿ ವಿಜಯ್ ಗೋಪಾಲ್ ಹೇಳಿದರು.
ಅಂದಹಾಗೆ, ಆರ್ ಕೆ ಸ್ವಾಮಿ ಹಂಸ ಗ್ರೂಪ್ ರಾಷ್ಟ್ರೀಯವಾಗಿ 400ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಇದು ಭಾರತೀಯ ಸ್ವಾಮ್ಯದ ಅತಿದೊಡ್ಡ ಬಹು-ವಿಭಾಗದ ಸಂಯೋಜಿತ ಮಾರ್ಕೆಟಿಂಗ್ ಸೇವಾ ಪೂರೈಕೆದಾರ ಕಂಪನಿಯಾಗಿದೆ. 2,000+ ಉದ್ಯೋಗಿಗಳೊಂದಿಗೆ, ಕಂಪನಿಯು ತನ್ನ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ. ರಾಷ್ಟ್ರದ ಅಡಿಪಾಯದಲ್ಲಿರುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದರ ಜೊತೆಗೆ, ಈ ಗ್ರೂಪ್, ಪ್ರಮುಖ ಖಾಸಗಿ ಗ್ರೂಪ್ಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದಯೋನ್ಮುಖ ಭಾರತೀಯ ಬ್ರ್ಯಾಂಡ್‌ಗಳು ಮತ್ತು ವ್ಯವಹಾರಗಳಿಗೆ ಸೇವೆ ಸಲ್ಲಿಸುತ್ತದೆ.
1973ರಲ್ಲಿ ಸ್ಥಾಪನೆಯಾದ ಆರ್ ಕೆ ಸ್ವಾಮಿ ಲಿಮಿಟೆಡ್ ಭಾರತದ ಪ್ರಮುಖ ಸಮಗ್ರ ಮಾರ್ಕೆಟಿಂಗ್ ಸೇವಾ ಪೂರೈಕೆದಾರ. ಈ ಕಂಪನಿಯು ಸೃಜನಶೀಲ, ಮಾಧ್ಯಮ, ಡೇಟಾ ವಿಶ್ಲೇಷಣೆ ಮತ್ತು ಮಾರುಕಟ್ಟೆ ಸಂಶೋಧನಾ ಸೇವೆಗಳಿಗೆ ಏಕ-ಗವಾಕ್ಷಿ ಪರಿಹಾರವನ್ನು ನೀಡುತ್ತದೆ. 2024ರ ಮಾರ್ಚ್ ತಿಂಗಳಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಈ ಕಂಪನಿ ಈಗ ಸಾರ್ವಜನಿಕ ಸೀಮಿತ ಕಂಪನಿಯಾಗಿದೆ.
ಆರ್ ಕೆ ಸ್ವಾಮಿ ಲಿಮಿಟೆಡ್ ಬಗ್ಗೆ ಇನ್ನಷ್ಟು ತಿಳಿಯಲು ಬಯಿಸಿದರೆ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ... https://www.rkswamy.com/
* ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: ಪ್ರಿಯಾಂಕಾ ಸೂರ್ಯವಂಶಿ, ಮುಖ್ಯಸ್ಥರು - ಪಿಆರ್ & ಇನ್ನೋವೇಶನ್, ಆರ್ ಕೆ ಸ್ವಾಮಿ ಲಿಮಿಟೆಡ್.
* ಮೇಲ್ ವಿಳಾಸ: priyanka.s@rkswamymedia.in |
* ಮೊಬೈಲ್ ಸಂಖ್ಯೆ : 96195 37598