ನ್ಯೂಸ್

ಕೆಲವು ದಿನಗಳಿಂದ ಬದಲಾದ ಗಂಡನ ನಡವಳಿಕೆ: ಬೆನ್ನತ್ತಿ ಹೋದ ಪತ್ನಿಗೆ ಕಾದಿತ್ತು ಶಾಕ್​!

ಹೈದರಾಬಾದ್​: ಬೇರೆ ಹೆಂಗಸಿನ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಪತಿಯನ್ನು ಪತ್ನಿ ರೆಡ್​ಹ್ಯಾಂಡ್​ ಆಗಿ ಹಿಡಿದ ಘಟನೆ ಹೈದರಾಬಾದ್​ನ ಜಗದ್ಗಿರಿಗುಟ್ಟದಲ್ಲಿ ನಡೆದಿದೆ.

ಜಗದ್ಗಿರಿಗುಟ್ಟದ ನಿವಾಸಿ ಅನಿಲ್​ ಎಂಬಾತ ಕುಟ್ಚ್​ಬುಲಪುರ್​ ಬ್ಯಾಂಕ್​ ಕಾಲನಿಯಲ್ಲಿರುವ ಮತ್ತೊಂದು ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಕಳೆದ ಕೆಲವು ದಿನಗಳಿಂದ ಗಂಡನ ನಡವಳಿಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಪತ್ನಿ ರಾಮೇಶ್ವರಿಗೆ ಅನುಮಾನ ಮೂಡಿತ್ತು. ಬಳಿಕ ಅನುಮಾನ ಬಗೆಹರಿಸಿಕೊಳ್ಳಲು ಪತ್ನಿ ಮುಂದಾದಳು.

ಪತಿಯನ್ನು ಹಿಂಬಾಲಿಸಿದ ರಾಮೇಶ್ವರಿ, ಬೇರೊಂದು ಮಹಿಳೆಯ ಜತೆ ಗಂಡ ಇರುವುದನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)