ಗುಜರಾತ್: ಪ್ರೇಯಸಿ ಜತೆ ಲೈಂಗಿಕ ಸಂಭೋಗ ನಡೆಸುವಾಗ ಆಕೆ ಗರ್ಭಿಣಿ ಆಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್ ಹಾಕಿ ಅಂಟಿಸಿಕೊಂಡು ಮೃತಪಟ್ಟಿರುವ ವಿಚಿತ್ರ ಪ್ರಸಂಗ ಗುಜರಾತಿನ ಅಹಮದಾಬಾದ್ನಲ್ಲಿ ನಡೆದಿದೆ.
ಫತೇಹವಾಡಿ ಏರಿಯಾದ ಸಲ್ಮಾನ್ ಮಿರ್ಜಾ (25) ತನ್ನ ಗರ್ಲ್ಫ್ರೆಂಡ್ ಜತೆ ಜೂನ್ 22ರಂದು ಜುಹಾಪುರಾದ ಏರಿಯಾದಲ್ಲಿರುವ ಹೋಟೆಲ್ ಒಂದಕ್ಕೆ ತೆರಳಿದ್ದಾನೆ. ಡ್ರಗ್ಸ್ ವ್ಯಸನಿಯಾಗಿದ್ದ ಇಬ್ಬರು ಅದೇ ಅಮಲಿನಲ್ಲಿ ಲೈಂಗಿಕ ಸಂಭೋಗ ನಡೆಸಲು ಬಯಸಿದ್ದರು. ಆದರೆ, ಕಾಂಡೋಮ್ ಸಿಗದಿದ್ದಾಗ ಬಾಯ್ಫ್ರೆಂಡ್ ತನ್ನ ಗುಪ್ತಾಂಗಕ್ಕೆ ಗಮ್ ಅಂಟಿಕೊಂಡಿದ್ದಾನೆ.
ಮರುದಿನ ಬೆಳಗ್ಗೆ ಮಿರ್ಜಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆರೋಗ್ಯ ಹದಗೆಟ್ಟಿದ್ದರಿಂದ ಗಾಬರಿಗೊಂಡ ಆತನ ಗರ್ಲ್ಫ್ರೆಂಡ್ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಇದಾದ ಬಳಿಕ ಜೂನ್ 25ರಂದು ಮಿರ್ಜಾ ಸಂಬಂಧಿಯೊಬ್ಬ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕರಾರ ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. (ಏಜೆನ್ಸೀಸ್)