ನವದೆಹಲಿ: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪತ್ನಿ ಬಗ್ಗೆ ಬಹುತೇಕರಿಗೆ ತಿಳಿದಿದೆ. ಏಕೆಂದರೆ, ಅವರೊಬ್ಬರ ಸೋಶಿಯಲ್ ಮೀಡಿಯಾ ಸೆನ್ಷೆಷನಲ್ ಸ್ಟಾರ್. ಅವರ ಹೆಸರು ಧನಶ್ರೀ ವರ್ಮ. ನೃತ್ಯ ಸಂಯೋಜಕಿ ಆಗಿರುವ ಧನಶ್ರೀ ಓರ್ವ ಯೂಟ್ಯೂಬರ್ ಕೂಡ ಹೌದು. ಯುಟ್ಯೂಬ್ನಲ್ಲಿ ವಿವಿಧ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತ ಗಮನ ಸೆಳೆಯುತ್ತ ಬಂದಿರು ಧನಶ್ರೀ ವರ್ಮ ಅವರು ಈಗ ಟಾಲಿವುಡ್ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ತೆಲುಗಿನ "ಮಾಚರ್ಲ ನಿಯೋಜಕವರ್ಗಂ" ಸಿನಿಮಾದ ಐಟಂ ಸಾಂಗ್ ರಾ ರಾ ರೆಡ್ಡಿ ಹಾಡಿಗೆ ಧನಶ್ರೀ ಬೋಲ್ಡ್ ಆಗಿ ಸೊಂಟ ಬಳುಕಿಸಿದ್ದಾರೆ. ಈ ಸಾಂಗ್ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಐಟಂ ಸಾಂಗ್ನಲ್ಲಿ ರಾನು ರಾನು ಅಂಟುಂದೆ ಸಿನ್ನದೋ ಎಂಬ ಸಾಲನ್ನು ಬಳಸಿಕೊಳ್ಳಲಾಗಿದೆ. ಇದು ನಿತಿನ್ ಅಭಿನಯದ ಜಯಂ ಸಿನಿಮಾದ ಹಾಡು. ಅದನ್ನು ಅವರದ್ದೇ ಆದ ಮಾಚರ್ಲ ನಿಯೋಜಕವರ್ಗಂ ಹೊಸ ಸಿನಿಮಾದಲ್ಲಿ ರೀಮಿಕ್ಸ್ ಮಾಡಲಾಗಿದೆ. ಈ ಹಾಡಿಗೆ ಸಿನಿಮಾದಲ್ಲಿ ನಟಿ ಅಂಜಲಿ ಅವರು ನಿತಿನ್ ಜೊತೆ ಮೈಚಳಿ ಬಿಟ್ಟು ಕುಣಿದಿದ್ದಾರೆ.
ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಕಷ್ಟು ಸಾಮಾಜಿಕ ಜಾಲತಾಣ ಬಳಕೆದಾರರು ರೀಲ್ಸ್ ಮತ್ತು ಶಾರ್ಟ್ಸ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಚಾಹಲ್ ಪತ್ನಿ ಧನಶ್ರೀ ಸಹ ಹೆಜ್ಜೆ ಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ಆಲ್ವೇಸ್ ಬಾರ್ನ್ ರೆಡಿ. ನಿಮ್ಮ ಶಕ್ತಿಯು ಯಾವಾಗಲೂ ಪರಿಮಾಣವನ್ನು ಹೇಳುತ್ತದೆ. ನೀವು ಮಾತನಾಡುವ ಮೊದಲು ಅದು ನಿಮ್ಮನ್ನು ಪರಿಚಯಿಸುತ್ತದೆ ಎಂದು ಅಡಿಬರಹ ನೀಡಿದ್ದಾರೆ.
ಧನಶ್ರೀ ಸೊಂಟ ಬಳುಕಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಮಾಚರ್ಲ ನಿಯೋಜಕವರ್ಗಂ, ಆಗಸ್ಟ್ 12ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ನಿತಿನ್, ಕೃತಿಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)