ಹೈದರಾಬಾದ್: ಹಾಸ್ಯ ಬ್ರಹ್ಮ ಎಂದೇ ಖ್ಯಾತಿಯಾಗಿರುವ ಬ್ರಹ್ಮಾನಂದಂ ಅವರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, "ತೆಲಂಗಾಣ ದೇವುಡು" ಸಿನಿಮಾದ ಪ್ರಮೋಷನ್ ಭಾಗವಾಗಿ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ತುಂಬಾ ಭಾವುಕರಾಗಿ ಮಾತನಾಡಿರುವ ಬ್ರಹ್ಮಾನಂದಂ, "ತೆಲಂಗಾಣ ದೇವುಡು" ಒಂದು ಸಂದೇಶವಿರುವ ಚಿತ್ರವಾಗಿದ್ದು, ನಾಳೆ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಜೀವನ ಆಧಾರಿತ ಸಿನಿಮಾ ಇದಾಗಿದೆ.
ಒಂದೊಳ್ಳೆ ಸಿನಿಮಾ ಮಾಡಿದ ನಿರ್ದೇಶಕ ಹರೀಶ್ ಅವರಿಗೆ ಬ್ರಹ್ಮಾನಂದಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ನನಗೆ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ನನ್ನನ್ನು ಕೇವಲ ಹಾಸ್ಯನಟನಾಗಿ ನೋಡದೆ, ಈ ಚಿತ್ರವನ್ನು ವೀಕ್ಷಿಸಿ ಎಂದು ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟ ಶ್ರೀಕಾಂತ್ ನಟಿಸಿದ್ದಾರೆ. (ಏಜೆನ್ಸೀಸ್)