ವಾಷಿಂಗ್ಟನ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್ಖೈದಾ ಉಗ್ರ ಸಂಘಟನೆಯ ನಾಯಕ ಐಮನ್ ಅಲ್-ಜವಾಹಿರಿನನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೋಮವಾರ ಘೋಷಿಸಿದ್ದಾರೆ.
2011ರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ಅಲ್ಖೈದಾ ಸಂಸ್ಥಾಪಕ ಒಸಮಾ ಬಿನ್ಲಾಡೆನ್ ಸಾವಿನ ಬಳಿಕ ಉಗ್ರ ಸಂಘಟನೆಗಾದ ಅತಿದೊಡ್ಡ ನಷ್ಟ ಇದಾಗಿದೆ. ಜವಾಹಿರಿ ಓರ್ವ ಈಜಿಪ್ತಿಯನ್ ಸರ್ಜನ್. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ದಾಳಿ ನಡೆದ ದಾಳಿಯಲ್ಲಿ 3000 ಮಂದಿ ಬಲಿಯಾಗಿದ್ದರು. ಈ ದಾಳಿಗೆ ಜವಾಹಿರಿ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಈತನ ತಲೆಗೆ 25 ಯುಎಸ್ ಡಾಲರ್ ಬಹುಮಾನ ಘೋಷಣೆ ಮಾಡಲಾಗಿತ್ತು.
ಭಾನುವಾರ ಬೆಳಗ್ಗೆ (ಕಾಬೂಲ್ ಸಮಯ) 6.18ರಲ್ಲಿ ಕಾಬೂಲ್ನಲ್ಲಿ ನಡೆದ ಯುಎಸ್ ಡ್ರೋನ್ ದಾಳಿಗೆ ಜವಾಹಿರಿ ಹತನಾಗಿದ್ದಾನೆ.
ಈ ಬಗ್ಗೆ ಟೆಲಿವೈಸ್ಡ್ ಮೂಲಕ ಸಂದೇಶ ರವಾನಿಸಿದ ಯುಎಸ್ ಅಧ್ಯಕ್ಷ ಜೋ ಬೈಡೆನ್, ಈ ಉಗ್ರ ನಾಯಕ ಇನ್ನಿಲ್ಲ ಮತ್ತು ನ್ಯಾಯವನ್ನು ನೀಡಲಾಗಿದೆ. ಎಷ್ಟು ಸಮಯ ತೆಗೆದುಕೊಂಡಿತು ಎಂಬುದು ಮುಖ್ಯವಲ್ಲ, ನೀನು ಎಲ್ಲಿ ಅಡಗಿದ್ದೆ ಎಂಬುದು ವಿಚಾರವಲ್ಲ, ನೀವು ನಮ್ಮ ಜನರಿಗೆ ಬೆದರಿಕೆಯಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ನಿಮ್ಮನ್ನು ಹುಡುಕುತ್ತದೆ ಮತ್ತು ನಿಮ್ಮನ್ನು ಹೊರಗೆಳೆದು ಹೊಡೆದು ಹಾಕುತ್ತದೆ ಎಂದು ಬೈಡೆನ್ ಹೇಳಿದ್ದಾರೆ. (ಏಜೆನ್ಸೀಸ್)