More

    ಟೆಂಡರ್ ಅಕ್ರಮಕ್ಕೆ ಬ್ರೇಕ್: ನಕಲಿ ದಾಖಲೆಗಳ ಪತ್ತೆಗೆ ಡಿಬಾರ್​ಮೆಂಟ್​ ಸಮಿತಿ ರಚನೆ

    | ಹರೀಶ್ ಬೇಲೂರು ಬೆಂಗಳೂರು

    ಕಾಮಗಾರಿಗಳಲ್ಲಿ ಶೇ.40 ಕಮೀಷನ್ ಆರೋಪದಿಂದ ಮುಜುಗರಕ್ಕೀಡಾಗಿರುವ ರಾಜ್ಯ ಸರ್ಕಾರ ಇದೀಗ ಟೆಂಡರ್ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಪಾರದರ್ಶಕ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಡಿಬಾರ್​ವೆುಂಟ್ ಸಮಿತಿ ರಚನೆ, ‘ಫಸ್ಟ್ ಕಮ್ ಫಸ್ಟ್ ಸರ್ವ್’ ಆಧಾರದಲ್ಲಿ ಬಿಲ್​ಗಳ ಪಾವತಿ ಹಾಗೂ ಕೆಟಿಪಿಪಿ ಕಾಯ್ದೆಯನ್ವಯ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವಿರುವ ಟೆಂಡರ್ ಅಂಗೀಕರಿಸದಂತೆ ನಿಯಮ ರೂಪಿಸುತ್ತಿದ್ದು, ಅಕ್ರಮಕ್ಕೆ ಕಡಿವಾಣ ಬೀಳುವ ಭರವಸೆ ಮೂಡಿದೆ.

    ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ, ಕಾಮಗಾರಿ ಅನುಷ್ಠಾನ ಮತ್ತು ಬಿಲ್​ಗಳ ಜ್ಯೇಷ್ಠತೆ ಆಧಾರದ ಮೇಲೆ ಪಾವತಿಸಲು ವಿಶೇಷ ತಂತ್ರಾಂಶ ಒಳಗೊಂಡ ವ್ಯವಸ್ಥೆ ರೂಪಿಸುವಂತೆ ಎಲ್ಲ ಸಂಗ್ರಹಣಾ ಪ್ರಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಈ ವ್ಯವಸ್ಥೆ ಮೂಲಕ ಗುತ್ತಿಗೆದಾರರಿಗೆ ಪಾವತಿಸಬೇಕಾದ ಮೊತ್ತವನ್ನು ‘ಮೊದಲು ಬಂದವರಿಗೆ ಆದ್ಯತೆ’ ಅನ್ವಯ ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಕಾಮಗಾರಿಗಳನ್ನು ನಡೆಸಿ ಹಲವು ವರ್ಷ ಕಳೆದರೂ ಹಣ ಪಡೆಯಲು ಗುತ್ತಿಗೆದಾರರು ಹರಸಾಹಸ ಮಾಡಬೇಕಾಗಿದೆ. ನೂತನ ವ್ಯವಸ್ಥೆ ಜಾರಿಯಾದಲ್ಲಿ ಬಿಲ್ ಪಾವತಿ ವಿಳಂಬವಾಗುವುದಿಲ್ಲ.

    ಲಾಭಾಂಶಕ್ಕೆ ನಿಯಂತ್ರಣ: ಸಾರ್ವಜನಿಕ ಸಂಗ್ರಹಣೆಗಳಲ್ಲಿ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರನ್ನು ಅಂಗೀಕರಿಸಬಾರದು. ಒಂದು ವೇಳೆ ಅಂಗೀಕರಿಸಲು ಬಯಸಿದ್ದಲ್ಲಿ ಸಮರ್ಥನೀಯ ಕಾರಣ ಕೊಟ್ಟು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆಯಬೇಕು. ಪ್ರಸಕ್ತ ಶೇ.10 ಮತ್ತು ಅದಕ್ಕಿಂತ ಹೆಚ್ಚಿನ ದರಗಳಿಗೆ ಟೆಂಡರ್ ನೀಡುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಟೆಂಡರ್​ನಲ್ಲಿ ಸ್ವೀಕೃತವಾದ ದರಗಳು ಅಂದಾಜು ಮೊತ್ತಕ್ಕಿಂತ ಹೆಚ್ಚಿದ್ದಲ್ಲಿ ಅದನ್ನು ಗಣನೀಯ ಹೆಚ್ಚುವರಿ ಎಂದು ಪರಿಗಣಿಸಿ ರದ್ದುಪಡಿಸಬೇಕು. ಬಳಿಕ ಮರು ಟೆಂಡರ್ ಕರೆಯಬೇಕು ಎಂದು ಸೂಚಿಸಲಾಗಿದೆ.

    ಸಾರ್ವಜನಿಕರ ಸಂಗ್ರಹಣೆಗಳ ಪ್ಲಾನಿಂಗ್, ಪ್ಯಾಕೇಜಿಂಗ್, ಶೆಡ್ಯೂಲಿಂಗ್ ಮತ್ತು ಅನುದಾನ ಆಧಾರದ ಮೇರೆಗೆ ಕಾರ್ಯಯೋಜನೆ ಅನುಷ್ಠಾನ ಮಾಡಬೇಕು. ತಾಲೂಕು ಮಟ್ಟದಲ್ಲಿ ಕಾಮಗಾರಿಗಳ ಪ್ಯಾಕೇಜ್ ಮೊತ್ತ ಗರಿಷ್ಠ 10 ಲಕ್ಷ ರೂ.ಗೆ ಸೀಮಿತಗೊಳಿಸಬೇಕು. ನಿಗದಿತ ಮಾನದಂಡಗಳ ಅನ್ವಯ ಕಡ್ಡಾಯವಾಗಿ ಟೆಂಡರ್ ಮೌಲ್ಯಮಾಪನ ಮಾಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ.

    ಮೂರು ವರ್ಷ ಡಿಬಾರ್: ಕೋಟ್ಯಂತರ ರೂ. ಮೌಲ್ಯದ ಟೆಂಡರ್​ಗಳನ್ನು ಗಿಟ್ಟಿಸಿಕೊಳ್ಳಲು ಕೆಲ ಕಂಪನಿಗಳು ನಕಲಿ ಕಾರ್ಯಕ್ಷಮತೆ ಮತ್ತು ವಹಿವಾಟು ದಾಖಲೆಗಳನ್ನು ಸಲ್ಲಿಸುತ್ತಿವೆ. ಇದರಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಸರ್ಕಾರಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಅನ್ವಯ ಟೆಂಡರುದಾರ, ಗುತ್ತಿಗೆದಾರ, ಸರಬರಾಜುದಾರ ಅಥವಾ ಯಾವುದೇ ಉತ್ತರಾಧಿಕಾರಿಯನ್ನು ಡಿಬಾರ್ ಮಾಡುವ ಕುರಿತು ಸಂಗ್ರಹಣಾ ಸಂಸ್ಥೆಗಳು ಡಿಬಾರ್​ವೆುಂಟ್ ಸಮಿತಿ ರಚಿಸಬೇಕು. ಈ ಸಮಿತಿ ಇಲಾಖೆಗಳಲ್ಲಿ ನಡೆಯುವ ಯಾವುದೇ ಟೆಂಡರ್​ಗಳಲ್ಲಿ ಪಾಲ್ಗೊಳ್ಳುವ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಲಿದೆ. ಬೋಗಸ್ ದಾಖಲೆಗಳನ್ನು ಸಲ್ಲಿಸಿ ಸಿಕ್ಕಿಬಿದ್ದರೆ ಅಂಥ ಕಂಪನಿಗಳನ್ನು ಗರಿಷ್ಠ 3 ವರ್ಷವರೆಗೆ ಕಪು್ಪಪಟ್ಟಿಗೆ ಸೇರಿಸುವ ಅಧಿಕಾರ ಸಮಿತಿಗೆ ಇರಲಿದೆ.

    ಮೌಲ್ಯಮಾಪನ ಕಡ್ಡಾಯ: ಟೆಂಡರ್ ಮೌಲ್ಯಮಾಪನ ಮೂಲಕ ಅತ್ಯಂತ ಕಡಿಮೆ ದರ ನಮೂದಿಸಿ ಅರ್ಹರಾದ ಎಲ್1 ಕಂಪನಿಗೆ ಟೆಂಡರ್ ನೀಡತಕ್ಕದ್ದು. ಈ ಕಂಪನಿ ಗುತ್ತಿಗೆ ನಿರ್ವಹಿಸದಿದ್ದಲ್ಲಿ ಇಎಂಡಿ ಹಣ ಮುಟ್ಟುಗೋಲು ಹಾಕಿಕೊಳ್ಳಬೇಕು. ವಿವಿಧ ಇಲಾಖೆಗಳ ಸಂಗ್ರಹಣಾ ಪ್ರಾಧಿಕಾರಿಗಳು ಕಾಮಗಾರಿಗಳ ಟೆಂಡರ್ ಕರೆಯುವಾಗ ಪಿಡಬ್ಲ್ಯುಜಿ ಫಾರಂ 65 ಬದಲು ಸರ್ಕಾರದಿಂದ ನೀಡಲಾಗಿರುವ ಮಾದರಿ ಟೆಂಡರ್ ದಾಖಲೆಗಳನ್ನು ಬಳಸಬೇಕು. ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಿಗಮ ಸೇರಿ ಸರ್ಕಾರದ ಅಧೀನದ ಸಂಸ್ಥೆಗಳಲ್ಲಿ ಡಿಬಾರ್​ವೆುಂಟ್ ಸಮಿತಿ ರಚಿಸಬೇಕು. ಜತೆಗೆ ನಿಯಮ ಪಾಲಿಸದ ಇಲಾಖೆಗಳಿಗೆ ದಂಡ ಹಾಕಲು ಸೂಚಿಸಿದೆ.

    ಬಹುತೇಕ ಇಲಾಖೆಗಳಲ್ಲಿ ಡಿಬಾರ್​ವೆುಂಟ್ ಸಮಿತಿ ಇಲ್ಲ. ಸಮಿತಿ ರಚಿಸುವುದರಿಂದ ಅರ್ಹತೆ ಹೊಂದಿರುವ ಕಂಪನಿಗಳಿಗೆ ಟೆಂಡರ್ ಸಿಗಲಿದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ.

    | ಈಶ್ವರ್ ಪ್ರಸಾದ್ ಸರ್ಕಾರಿ ನಿವೃತ್ತ ಅಧಿಕಾರಿ

    25 ಸಾವಿರ ಕೋಟಿ ರೂ. ಬಾಕಿ: 2 ವರ್ಷಗಳಿಂದ ಕಾಮಗಾರಿಗಳ ಅಂದಾಜು -ಠಿ;25 ಸಾವಿರ ಕೋಟಿ ಮೊತ್ತದ ಬಿಲ್​ಗಳು ಬಾಕಿಯಿವೆ. ಬಿಬಿಎಂಪಿಯಲ್ಲಿ 28 ತಿಂಗಳಿಂದ -ಠಿ;3 ಸಾವಿರ ಕೋಟಿ ಪಾವತಿಸಬೇಕಿದೆ. ಇವುಗಳ ವಿಲೇವಾರಿಗೆ ವಿಶೇಷ ತಂತ್ರಾಂಶ ಜಾರಿಗೆ ತಂದರೆ ಗುತ್ತಿಗೆದಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.

    ಅಕ್ರಮ ಅವ್ಯಾಹತ: ಲೋಕೋಪಯೋಗಿ, ಜಲ ಸಂಪನ್ಮೂಲ, ಸೇರಿ ಹಲವೆಡೆ ಟೆಂಡರ್​ಗಳಲ್ಲಿ ಅಕ್ರಮಗಳು ವರದಿಯಾಗು ತ್ತಿರುತ್ತವೆ. ಕೆಲವೆಡೆ ನಿಗದಿಗಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದರೆ, ಕೆಲ ಟೆಂಡರ್​ಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಅರ್ಹತೆ ಇಲ್ಲದ ಕಂಪನಿಗಳು ಟೆಂಡರ್ ಪಡೆಯುತ್ತಿವೆ.

    ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts