ನ್ಯೂಸ್

ನಟಿಯ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬೆತ್ತಲೆ ಫೋಟೋಗಳು! ಕರೆ ಮಾಡಿ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಅನಾಮಿಕ

ತಿರುವನಂತಪುರಂ: ಮಲಯಾಳಂ ನಟಿ ಸಾಧಿಕ ವೇಣುಗೋಪಾಲ್​ ಅವರ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬೆತ್ತಲೆ ಚಿತ್ರಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಅನಾಮಿಕರೊಬ್ಬರು ಕರೆ ಮಾಡಿ ತಿಳಿಸಿದ ಬಳಿಕ ಇನ್​ಸ್ಟಾಗ್ರಾಂ ನೋಡಿದ ನಟಿ ಸಾಧಿಕಾ ಅವರು ತಕ್ಷಣ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ವಿವರಣೆಗೆ ಬರುವುದಾದರೆ, ಸಾಧಿಕಾ ಅವರು ಇತ್ತೀಚೆಗೆ ದೂರವಾಣಿ ಕರೆಯೊಂದನ್ನು ಸ್ವೀಕರಿಸುತ್ತಾರೆ. ಫೋನ್​ನಲ್ಲಿ ಆ ಕಡೆಯಿಂದ ಮಾತನಾಡುವ ವ್ಯಕ್ತಿ ನೀವು ಬೆತ್ತಲೆ ಚಿತ್ರವನ್ನು ಹೊರತುಪಡಿಸಿ ಉಳಿದೆಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಯಸುತ್ತೇವೆ ಎನ್ನತ್ತಾನೆ. ಇದನ್ನು ಕೇಳಿದ ಸಾಧಿಕಾಗೆ ಒಂದು ಕ್ಷಣ ಶಾಕ್​ ಆಗುತ್ತದೆ. ನಾನೆಂದಿಗೂ ಇನ್​ಸ್ಟಾಗ್ರಾಂನಲ್ಲಿ ತುಂಬಾ ಮೈಮಾಟ ಕಾಣುವಂತ ಪೋಸ್ಟ್​ ಮಾಡುವುದಿಲ್ಲ. ನಾನು ಹೇಗೆ ಬೆತ್ತಲೆ ಫೋಟೋಗಳನ್ನು ಪೋಸ್ಟ್​ ಮಾಡಲು ಸಾಧ್ಯ ಎಂದು ಕರೆ ಮಾಡಿದವನನ್ನು ಸಾಧಿಕಾ ಪ್ರಶ್ನಿಸಿದ್ದಾರೆ.

ಇದಾದ ಬಳಿಕ ದೂರವಾಣಿ ಕರೆ ಮಾಡಿದಾತ ಸಾಧಿಕಾಗೆ ಲಿಂಕ್​ ಒಂದನ್ನು ಶೇರ್​ ಮಾಡುತ್ತಾನೆ. ಖಾತೆ ನಿಮ್ಮ ಹೆಸರಿನಲ್ಲಿದೆ ಮತ್ತು ನಿಮ್ಮ ಫೋಟೋಗಳಿವೆ ಎಂದು ಹೇಳುತ್ತಾನೆ. ನಟಿ ಲಿಂಕ್​ ಓಪನ್​ ಮಾಡಿದ ಕೂಡಲೇ ಆಘಾತವಾಗುತ್ತದೆ. ಅದರಲ್ಲಿ ಎಡಿಟ್​ ಮಾಡಲಾದ ಬೆತ್ತಲೇ ಫೋಟೋಗಳಿರುತ್ತವೆ.

ಗಮನಕ್ಕೆ ಬಂದ ತಕ್ಷಣ ಸಾಧಿಕಾ ಕೇರಳ ಸೈಬರ್​ ಕ್ರೈಂ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಐಪಿ ಅಡ್ರೆಸ್​ನ ಆಧಾರದ ಮೇಲೆ ಪ್ರಬುದ್ಧಿ ಎಂಬಾತನನ್ನು ಬಂಧಿಸಿದ್ದಾರೆ. ಆದಾಗ್ಯೂ ಪ್ರಕರಣವನ್ನು ಹಿಂಪಡೆದುಕೊಂಡಿರುವ ಸಾಧಿಕಾ ಈ ರೀತಿಯ ದುಷ್ಕೃತ್ಯವೆಸಗಿ ನಮ್ಮ ವೃತ್ತಿ ಜೀವನವನ್ನು ಹಾಳು ಮಾಡಬೇಡಿ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂ ಮೂಲಕ ನಟಿ ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)