ಸಾಂದರ್ಭಿಕ ಚಿತ್ರ 
ನ್ಯೂಸ್

ದಂಪತಿ ನಡುವೆ ಜಗಳ..45 ದಿನದ ಮಗುವನ್ನು ಕೊಂದ ತಂದೆ

ತೆಲಂಗಾಣ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆಯೇ ಹೀಗೆ ದಂಪತಿ ನಡುವಿನ ಜಗಳದಲ್ಲಿ ಮಗು ಪ್ರಾಣ ಬಿಟ್ಟಿರುವ ಘಟನೆ ಭಾನುವಾರ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.

ಮೇದಕ್ ಜಿಲ್ಲೆಯ ಶಂಕರಂಪೇಟ್ ಕೇಂದ್ರದಲ್ಲಿರುವ ನಿರ್ಮಲಾ ದಂಪತಿಗೆ ಎಂಬ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡನೇ ಮಗ ಜಸ್ವಂತ್ (45 ದಿನ) ಮೃತ ಬಾಲಕ. ಮದ್ಯವ್ಯಸನಿ ತಂದೆ ಜನಮೂಲ ರಮೇಶ್ ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜನಮೂಲ ರಮೇಶ್ ಪತ್ನಿ ನಿರ್ಮಲಾ ಪೆದ್ದ ಶಂಕರಂಪೇಟೆ ಗ್ರಾಮಕ್ಕೆ ಹೆರಿಗೆಗೆಂದು ತನ್ನ ತಾಯಿಯ ಮನೆಗೆ ಬಂದು ಇಲ್ಲೇ ಇರುತ್ತಾಳೆ. ಈ ವೇಳೆ ನಿರ್ಮಲಾ ಅವರ ಪತಿ ಹೆಂಡತಿ ಹಾಗೂ ಮಗುವನ್ನು ನೋಡಲು ಬಂದಿದ್ದನು.

ನಿರ್ಮಲಾಳನ್ನು ತವರು ಮನೆಗೆ ಕರೆದುಕೊಂಡು ಹೋಗುವ ಭರದಲ್ಲಿ ಅತ್ತೆಯ ಮನೆಯಲ್ಲಿ ಜಗಳ ಶುರುವಾಗಿದ್ದು, ಕುಡಿದು ಬಂದ ರಮೇಶ್ ನಿರ್ಮಲಾ ಜೊತೆ ಕೆಲಹೊತ್ತು ಜಗಳವಾಡಿ ತೊಟ್ಟಿಲಿನಲ್ಲಿದ್ದ ಮಗುವನ್ನು ಎತ್ತಿಕೊಂಡಿದ್ದಾನೆ. ಜಗಳದ ವೇಳೆ ಮಗುವನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ಇಬ್ಬರ ನಡುವೆ ನಜ್ಜುಗುಜ್ಜಾಗಿ ಬಾಲಕ ಮೃತಪಟ್ಟಿದ್ದಾನೆ.

ಪಾನಮತ್ತನಾಗಿದ್ದ ರಮೇಶ್‌ನನ್ನು ನೆರೆಹೊರೆಯವರು ಹಿಡಿದು ಜಗಳ ನಿಲ್ಲಿಸಿದ್ದಾರೆ.  ಕಣ್ಣೆದುರೇ ಮಗ ಸಾವನ್ನಪ್ಪಿದ್ದರಿಂದ ತಾಯಿ ಕಣ್ಣೀರು ಹಾಕುತ್ತಿದ್ದಾರೆ.