ನ್ಯೂಸ್

Pushpa 2 Trailer: ಪುಷ್ಪ ಅಂದ್ರೆ ಫ್ಲವರ್​ ಅಲ್ಲ... ಹಳೆ ಡೈಲಾಗ್​ಗೆ ಹೊಸ ಕಿಚ್ಚು ಹಚ್ಚಿದ ಅಲ್ಲು ಅರ್ಜುನ್​!

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಸುಕುಮಾರ್​ ನಿರ್ದೇಶನದ ಹಾಗೂ ಟಾಲಿವುಡ್​ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ‘ಪುಷ್ಪ 2’ ಚಿತ್ರ ಇದೇ ಡಿಸೆಂಬರ್ 05ರಂದು ಜಾಗತಿಕ ರಿಲೀಸ್​ಗಾಗಿ ಎದುರುನೋಡುತ್ತಿದೆ. ಈ ಬಗ್ಗೆ ತೀವ್ರ ಕಾತರ, ಕುತೂಹಲ ವ್ಯಕ್ತಪಡಿಸುತ್ತಿದ್ದ ಫ್ಯಾನ್ಸ್​ಗೆ ಇದೀಗ ಟ್ರೇಲರ್ ಧಮಾಕ ಕಂಡು ಭಾರೀ ಸಂತಸ ಉಂಟಾಗಿದೆ. ಇಂದು ಅಧಿಕೃತವಾಗಿ ಬಿಡುಗಡೆಗೊಂಡ ಪುಷ್ಪ 2 ಚಿತ್ರದ ಟ್ರೇಲರ್​ ನೋಡಿ, ಸಿನಿಪ್ರಿಯರು ಫಿದಾ ಆಗಿದ್ದಾರೆ.

ಅಲ್ಲು ಅರ್ಜುನ್​ ಆ್ಯಕ್ಷನ್​, ಮಾಸ್​ ಡೈಲಾಗ್​, ಡ್ಯಾನ್ಸ್​ ಮತ್ತು ಖಡಕ್​ ಲುಕ್​ಗಳು ನೋಡುಗರನ್ನು ಸೆಳೆದಿವೆ. ಹಲವು ಆಯಾಮಗಳಲ್ಲಿ ಮೂಡಿಬಂದಿರುವ 'ಪುಷ್ಪ 2' ಚಿತ್ರದ ಟ್ರೇಲರ್​ನಲ್ಲಿ ಫಹಾದ್​ ಫಾಸಿಲ್​ ಎಂಟ್ರಿ ಕೂಡ ನೋಡುಗರಲ್ಲಿ ಕುತೂಹಲ ಕೆರಳಿಸುವಂತಿದೆ. ಬಗೆಬಗೆಯ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುವ ಅಲ್ಲು ಅರ್ಜುನ್ ಪಾತ್ರ, ಕಥೆಯಲ್ಲಿ ಭಾರೀ ಟ್ವಿಸ್ಟ್​ ಇಟ್ಟಿರುವಂತೆ ಸೂಚಿಸಿದೆ. ಟ್ರೇಲರ್​ನ ಕೊನೆಯಲ್ಲಿ ತಮ್ಮ ಹಳೆಯ ಪುಷ್ಟ ಅಂದ್ರೆ ಫ್ಲವರ್​ ಅಲ್ಲ, ಫೈರ್​ ಅನ್ನೋ ಡೈಲಾಗ್​ಗೆ ಹೊಸ ರೂಪವನ್ನು ಕೊಟ್ಟಿರುವ ನಿರ್ದೇಶಕರು, ಇಂದಿನಿಂದ ಇದೇ ಡೈಲಾಗ್ ನೀವು ಬಳಸಬೇಕು ಎಂಬುದನ್ನು ಸಿನಿಪ್ರಿಯರಿಗೆ ಪರೋಕ್ಷವಾಗಿ ತಿಳಿಸಿದಂತೆ ಕಂಡುಬಂದಿದೆ.

ಬಿಹಾರದಲ್ಲಿ ಅಲ್ಲು ಅರ್ಜುನ್​ ಅಭಿನಯದ ಬಹುನಿರೀಕ್ಷಿತ ಚಿತ್ರದ ಟ್ರೇಲರ್​ಗೆ ದೊಡ್ಡ ವೇದಿಕೆಯನ್ನೇ ಸೃಷ್ಟಿಸಲಾಗಿದ್ದು, ನೆಚ್ಚಿನ ನಟನ ಸಿನಿಮಾ ಟ್ರೇಲರ್ ವೀಕ್ಷಿಸಲು ಜನಸಾಗರವೇ ಸೇರಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಈ ತುಣುಕುಗಳನ್ನು ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದೆ. ಚಿತ್ರದ ಮೇಕಿಂಗ್​ಗೆ ಫಿದಾ ಆಗಿರುವ ಸಿನಿಪ್ರಿಯರು, ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನುಸೂಯಾ ಭಾರದ್ವಾಜ್​, ಜಗದೀಶ್​, ಬ್ರಹ್ಮಾಜೀ, ಸುನಿಲ್, ಅಜಯ್ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).