ಮರು ನಿರ್ಮಾಣ ಮಾಡಿದ ‘ಕಿಂದರಿಜೋಗಿ’ ಪ್ರತಿಮೆ ಅನಾವರಣ

mysore
Published on

ರಂಗಾಯಣದ ವತಿಯಿಂದ ಕಲಾಮಂದಿರ ಆವರಣದಲ್ಲಿ ಮರು ನಿರ್ಮಾಣ ಮಾಡಿದ ‘ಕಿಂದರಿಜೋಗಿ’ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅನಾವರಣಗೊಳಿಸಿದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಹಿರಿಯ ರಂಗಕರ್ಮಿಎಚ್. ಜನಾರ್ಧನ್ (ಜನ್ನಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗಸಮಾಜದ ಸುರೇಶ್ ಬಾಬು, ಗುರುರಾಜ್, ಸವಿತಾ ಪ. ಮಲ್ಲೇಶ್ ಸೇರಿದಂತೆ ಇತರರು ಇದ್ದರು.

ಕಳೆದ 30 ವರ್ಷದ ಹಿಂದೆ ದ್ವಾರಕಿ ಅವರ ನೇತೃತ್ವದಲ್ಲಿ ರಂಗಾಯಣದ ಆವರಣದಲ್ಲಿ ಕಿಂದರಿ ಜೋಗಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ಕಿಂದರಿಜೋಗಿಯ ಕೋಡು ಮುರಿದಿತ್ತುಘಿ. ಜೊತೆಗೆ ಪ್ರತಿಮೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿತ್ತುಘಿ. ಇದನ್ನು ಮನಗಂಡು ರಂಗಾಯಣವು ಕಿಂದರಿಜೋಗಿ ಪ್ರತಿಮೆಯನ್ನು ಮರು ನಿರ್ಮಾಣ ಮಾಡಿದೆ. ಇದೀಗ ಕಾವಾದ ವಿದ್ಯಾರ್ಥಿಗಳಾದ ಸ್ಮದುಲ್, ಪೃಥ್ವಿ, ಮಿನಲ್ ಕಿಂದರಿಜೋಗಿ ಪ್ರತಿಮೆಗೆ ಮರುವಿನ್ಯಾಸ ರೂಪ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net