ಮುಂಬೈ: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2(Pushpa 2): ದಿ ರೂಲ್’ ಚಿತ್ರಕ್ಕಾಗಿ ಅಭಿಮಾನಿಗಳು ಮೂರು ವರ್ಷಗಳಿಂದ ಕಾಯುತ್ತಿದ್ದರು. ಈ ಕಾಯುವಿಕೆಯನ್ನು ಅಂತಿಮಗೊಳಿಸುವಂತೆ ಇದೀಗ ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಮುಂಗಡ ಬುಕ್ಕಿಂಗ್ ನವೆಂಬರ್ 30 ರಿಂದ ಪ್ರಾರಂಭವಾಗಿದ್ದು ಕೇವಲ 24 ಗಂಟೆಗಳಲ್ಲಿ 7.8 ಕೋಟಿ ಗಳಿಸಿದೆ ಎನ್ನಲಾಗಿದೆ.
ಇದನ್ನು ಓದಿ: ಟಾಲಿವುಡ್ ಸ್ಟೈಲಿಶ್ ಸ್ಟಾರ್ಗೆ ಕಾನೂನು ಕಂಟಕ; ಅಲ್ಲು ಅರ್ಜುನ್ ವಿರುದ್ಧ ಹೊಸ ಪ್ರಕರಣ ದಾಖಲು | Allu Arjun
'ಪುಷ್ಪ 2' ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಕ್ರೇಜ್ ಮುಂಗಡ ಬುಕ್ಕಿಂಗ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ವರದಿಗಳ ಪ್ರಕಾರ ಮುಂಗಡ ಕಾಯ್ದಿರಿಸಿದ ಮೊದಲ ದಿನವೇ 'ಪುಷ್ಪ 2' ಚಿತ್ರದ 55 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ. ವಿಶ್ವಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಅಂದಾಜಿಸಲಾಗಿದೆ.
ಪುಷ್ಪ 2 ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆಗೆ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಪುಷ್ಪ 2' ಘೋಷಣೆಯ ಬಳಿಕ ಉಂಟಾದ ಕ್ರೇಜ್ ಟ್ರೈಲರ್ ಲಾಂಚ್ ಬಳಿಕ ಮತ್ತಷ್ಟು ಹೆಚ್ಚಾಯಿತು. ಈಗ ಜನರು 'ಪುಷ್ಪ 2' ವೀಕ್ಷಿಸಲು ಉತ್ಸುಕರಾಗಿದ್ದಾರೆ ಮತ್ತು ಮುಂಗಡ ಬುಕ್ಕಿಂಗ್ ತೆರೆದ ತಕ್ಷಣ ಟಿಕೆಟ್‌ಗಳು ತ್ವರಿತ ಗತಿಯಲ್ಲಿ ಮಾರಾಟವಾಗುತ್ತಿವೆ.
ಪುಷ್ಪ 2 ಮೊದಲ ದಿನದ ಮುಂಗಡ ಬುಕ್ಕಿಂಗ್ ಕುರಿತು ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ದೇಶಾದ್ಯಂತ 8 ಕೋಟಿ 81 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇದರ ಪ್ರಕಾರ ಮೊದಲ ದಿನದ ಮುಂಗಡ ಬುಕ್ಕಿಂಗ್‌ನಿಂದ 'ಪುಷ್ಪ 2' 8.8 ಕೋಟಿ ಗಳಿಸಿದೆ. ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ಮುಂಗಡ ಬುಕ್ಕಿಂಗ್ ಮತ್ತು ಕಲೆಕ್ಷನ್ ವಿಚಾರದಲ್ಲಿ ಇದು 'ಬಾಹುಬಲಿ 2' ಮತ್ತು ಕೆಜಿಎಫ್ 2 ದಾಖಲೆಗಳನ್ನು ಮುರಿಯಬಹುದು ಎಂದು ಊಹಿಸಲಾಗಿದೆ. 'ಬಾಹುಬಲಿ 2' ಮುಂಗಡ ಬುಕ್ಕಿಂಗ್‌ನಿಂದ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕೆಜಿಎಫ್ 2 ಮೊದಲ ದಿನವೇ 80 ಕೋಟಿ ಗಳಿಸಿತ್ತು.(ಏಜೆನ್ಸೀಸ್)