ನವದೆಹಲಿ: ಲಾಕ್ಡೌನ್ ಸಮಯದಲ್ಲಿ ಆರ್ಥಿಕತೆ ಕುಸಿಯುವ ಹಂತಕ್ಕೆ ತಲುಪಿದ್ದರೆ, ಕೆಲವು ಕ್ಷೇತ್ರಗಳಿಗಂತೂ ಇದು ಹಬ್ಬವೇ ಆಗಿತ್ತು. ಅದರಲ್ಲೂ ಚೀನಾದ ಪಬ್ಜಿ ಮೊಬೈಲ್ ಗೇಮ್ ಆದಾಯ ಗಳಿಕೆಯಲ್ಲಿ ಜೀವಮಾನದ ದಾಖಲೆ ಮಾಡಿದೆ.
ಟೆನ್ಸೆಂಟ್ ಗೇಮ್ಸ್ ಪ್ಲೇಯರ್ಸ್ ಅನ್ನೌನ್ ಬ್ಯಾಟಲ್ ಗ್ರೌಂಡ್ (ಪಬ್ಜಿ) ಜಾಗತಿಕವಾಗಿ ಏಳು ತಿಂಗಳಲ್ಲಿ 22,403 ಕೋಟಿ ರೂ. ಆದಾಯ ಗಳಿಸಿದೆ. ಮೊಬೈಲ್ ಆ್ಯಪ್ಗಳ ಟ್ರೆಂಡ್ ಗುರುತಿಸುವ ಸೆನ್ಸರ್ ಟವರ್ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಮಾರ್ಚ್ ತಿಂಗಳೊಂದರಲ್ಲಿಯೇ 270 ಮಿಲಿಯನ್ ಡಾಲರ್ ಗಳಿಸಿದ್ದರೆ, ಈ ವರ್ಷದಲ್ಲಿ ಇದರ ಒಟ್ಟಾರೆ ಗಳಿಕೆ 1.3 ಬಿಲಿಯನ್ ಆಗಿತ್ತು. ಇನ್ನೊಂದು ಜನಪ್ರಿಯ ಮೊಬೈಲ್ ಶೂಟರ್ ಗೇಮ್ಗೆ ಹೋಲಿಸಿದರೆ ಇದರ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಗೇಮ್ಗಳಷ್ಟೇ ಇನ್ನೂ ಹಲವು ಗೇಮ್ಗಳಿಗೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ನೈವ್ಸ್ ಓಟ್ ಫ್ರಾಮ್ ನೆಟ್ಈಸ್ ಗೇಮ್ 260 ಮಿಲಿಯನ್ ಡಾಲರ್, ಕಾಲ್ ಫಾರ್ ಡ್ಯೂಟಿ 220 ಮಿಲಿಯನ್ ಗಳಿಸಿದೆ.
ಹೆಚ್ಚಿನ ಆದಾಯ ಚೀನಾದಿಂದಲೇ ಬಂದಿದ್ದರೆ, ನಂತರದ್ದು ಅಮೆರಿಕದಿಂದ, ಬಳಿಕ ಜಪಾನ್ನಿಂದ ಹೆಚ್ಚಿನ ಆದಾಯ ಬಂದಿದೆ ಎಂದು ಸೆನ್ಸರ್ ಟವರ್ ಮಾಹಿತಿ ನೀಡಿದೆ.