ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ (ECI) ಪ್ರಧಾನ ಕಚೇರಿಗೆ ವಿಪಕ್ಷಗಳ ಇಂಡಿಯಾ ಬ್ಲಾಕ್‌ನ ನೂರಾರು ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇದನ್ನೂ ಓದಿ: 'ಬಂಗಾರ'ದ ಪ್ರಿಯರಿಗೆ ಗುಡ್ನ್ಯೂಸ್; 'ಚಿನ್ನ' ಬೆಲೆ ಇಳಿಕೆ, ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ| Gold Rate Today
ಈ ಸಮಯದಲ್ಲಿ ಸಂಸತ್ತಿನಿಂದ ನಾಯಕರ ಮೆರವಣಿಗೆಯನ್ನು ಅಧಿಕಾರಿಗಳು ತಡೆದ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪೊಲೀಸ್ ಬ್ಯಾರಿಕೇಡ್ ಮೇಲೆ ಜಿಗಿಯುತ್ತಿರುವುದು ಕಂಡುಬಂದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್ ಅವರು ನಮ್ಮ ಹೋರಾಟವನ್ನು ತಡೆಯಲು ಸರ್ಕಾರ ಪೊಲೀಸರನ್ನು ಬಳಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ವೇಳೆ ಚುನಾವಣಾ ಆಯೋಗದ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ವಿರೋಧ ಪಕ್ಷದ ಸಂಸದರನ್ನು ಪೊಲೀಸರು ತಡೆದಾಗ ಅಖಿಲೇಶ್ ಅವರು ಬ್ಯಾರಿಕೇಡ್‌ನಿಂದ ಹಾರಿ ಪ್ರತಿಭಟಿಸಿದ್ದಾರೆ.
(ಏಜೆನ್ಸೀಸ್)
ಮತದಾರರ ಪಟ್ಟಿಗಳ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಾರದರ್ಶಕ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ.
ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಳಗ್ಗೆ 11:30 ರ ಸುಮಾರಿಗೆ ಸಂಸತ್ತಿನಿಂದ ಹೊರಟ ಮೆರವಣಿಗೆಯಲ್ಲಿ ಉಭಯ ಸದನಗಳ 300 ಕ್ಕೂ ಹೆಚ್ಚು ಸಂಸದರು ಭಾಗವಹಿಸಿದ್ದರು. ಆದಾಗ್ಯೂ, ದೆಹಲಿ ಪೊಲೀಸರು ಚುನಾವಣಾ ಆಯೋಗದ ಕಚೇರಿಗೆ ಹೋಗುವ ಮಾರ್ಗದಲ್ಲಿ ಹಲವಾರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಗುಂಪನ್ನು ನಿಲ್ಲಿಸಲಾಯಿತು.