ನ್ಯೂಸ್

2100ನೇ ವರ್ಷಕ್ಕೆ ಜಗತ್ತಿನ ಜನಸಂಖ್ಯೆ ಎಷ್ಟಿರಲಿದೆ ಗೊತ್ತೇ?; ಇಲ್ಲಿದೆ ಇತ್ತೀಚಿನ ವರದಿ

ಮೋಹನ್​ ಶೆಟ್ಟಿ

ಅಮೆರಿಕಾ: ಜಾಗತಿಕ ಜನಸಂಖ್ಯೆ ಎಷ್ಟಿರಬಹುದು ಎಂಬ ಲೆಕ್ಕಾಚಾರಗಳು ನಮ್ಮಲ್ಲಿ ಆಗಾಗ್ಗೆ ಮೂಡುವುದು ಸಹಜ! ಆದ್ರೆ, ಇದಕ್ಕೆ ಉತ್ತರ ದೊರಕಿದರೂ ಸಹ, ಆ ಉತ್ತರದಲ್ಲಿ ವ್ಯತ್ಯಾಸ ಕಂಡಬರುವುದು ಸಹಜವೇ ಸರಿ. ಪ್ರತಿದಿನ, ಪ್ರತಿಕ್ಷಣ ಜಗತ್ತಿನಲ್ಲಿ ಹುಟ್ಟುವವರ ಸಂಖ್ಯೆಯ ಜತೆಗೆ ಮರಣ ಹೊಂದುವವರ ಸಂಖ್ಯೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

ಇಡೀ ಜಗತ್ತಿನ ಜನಸಂಖ್ಯೆ ತಿಳಿದುಕೊಳ್ಳುವ ಕುತೂಹಲವಿರುವ ನಮಗೆ, ನಮ್ಮ ದೇಶದ ಒಟ್ಟು ಜನಸಂಖ್ಯಾ ಸ್ಫೋಟ ಕೂಡ ಎಷ್ಟಿರಬಹುದು ಎಂಬ ಯೋಚನೆ ಇರುತ್ತದೆ. ಆದ್ರೆ, ಇತ್ತೀಚಿನ ವರದಿಯೊಂದು ಪ್ರಸಕ್ತ ವರ್ಷದ ಮಾಹಿತಿಯನ್ನೂ ಮೀರಿ 2100ನೇ ವರ್ಷಕ್ಕೆ ಪ್ರಪಂಚದ ಒಟ್ಟು ಜನಸಂಖ್ಯೆ ಎಷ್ಟಿರಲಿದೆ ಎಂಬ ಯೋಜಿತ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. 'ವರ್ಲ್ಡ್​ ಆಫ್​ ಸ್ಟಾಟಿಸ್ಟಿಕ್ಸ್' ನೀಡಿದ ವರದಿ ಈ ಕೆಳಕಂಡಂತಿದೆ.

2100 ರಲ್ಲಿ ಯೋಜಿತ ಜನಸಂಖ್ಯೆ ಹೀಗಿರಲಿದೆ:

ಭಾರತ: 1,533 ಮಿಲಿಯನ್

ಚೀನಾ: 771M

ನೈಜೀರಿಯಾ: 546M

ಪಾಕಿಸ್ತಾನ: 487M

ಕಾಂಗೋ: 431M

ಅಮೆರಿಕಾ: 394M

ಇಥಿಯೋಪಿಯಾ: 323M

ಇಂಡೋನೇಷ್ಯಾ: 297M

ತಾಂಜಾನಿಯಾ: 244M

ಈಜಿಪ್ಟ್: 205M

ಬ್ರೆಜಿಲ್: 185M

ಫಿಲಿಪೈನ್ಸ್: 180M

ಬಾಂಗ್ಲಾದೇಶ: 177M

ನೈಜರ್: 166M

ಸುಡಾನ್: 142M

ಅಂಗೋಲಾ: 133M

ಉಗಾಂಡಾ: 132M

ಮೆಕ್ಸಿಕೋ: 116M

ಕೀನ್ಯಾ: 113M

ರಷ್ಯಾ: 112M

ಇರಾಕ್: 111M

ಅಫ್ಘಾನಿಸ್ತಾನ: 110M

ಮೊಜಾಂಬಿಕ್: 106M

ವಿಯೆಟ್ನಾಂ: 91M

ಕೋಟ್ ಡಿ'ಐವರಿ: 88M

ಕ್ಯಾಮರೂನ್: 87M

ಮಾಲಿ: 87M

ಮಡಗಾಸ್ಕರ್: 83M

ಟರ್ಕಿ: 82M

ಇರಾನ್: 79M

ದಕ್ಷಿಣ ಆಫ್ರಿಕಾ: 74M

ಯೆಮೆನ್: 74M

ಜಪಾನ್: 74M

ಯುಕೆ: 70M

ಜರ್ಮನಿ: 68M

ಫ್ರಾನ್ಸ್: 60M

ಕೆನಡಾ: 53M

ಸೌದಿ ಅರೇಬಿಯಾ: 50M

ಅರ್ಜೆಂಟೀನಾ: 47M

ಆಸ್ಟ್ರೇಲಿಯಾ: 38M

ಇಟಲಿ: 36M

ಸ್ಪೇನ್: 30M

ದಕ್ಷಿಣ ಕೊರಿಯಾ: 24M

ನೆದರ್ಲ್ಯಾಂಡ್ಸ್: 16M

ಯುಎಇ: 14M

ಸ್ವೀಡನ್: 13M

ಸ್ವಿಜರ್ಲ್ಯಾಂಡ್: 10M

ಆಸ್ಟ್ರಿಯಾ: 8M

ನಾರ್ವೆ: 7M

ಡೆನ್ಮಾರ್ಕ್: 7M

ಫಿನ್ಲ್ಯಾಂಡ್: 5M

ಸ್ಲೊವೇನಿಯಾ 1.6M, ಲಾಟ್ವಿಯಾ 0.95M, ಎಸ್ಟೋನಿಯಾ 0.83M, ಐಸ್ಲ್ಯಾಂಡ್ 0.37M ಇರಲಿದ್ದು, ವಿಶ್ವದ ಒಟ್ಟು ಜನಸಂಖ್ಯಾ ಸ್ಪೋಟ 10.25 ಬಿಲಿಯನ್ ಇರಲಿದೆ ಎಂದು ವರದಿ ಉಲ್ಲೇಖಿಸಿದೆ.