ಶಿಮ್ಲಾ : ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಖಾಸಗಿ ವಿಶ್ವವಿದ್ಯಾನಿಲಯವೊಂದರಲ್ಲಿ ಜೂನಿಯರ್ ಎಂಬಿಎ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ದೇಶ ವಿರೋಧಿ ಶಕ್ತಿಗಳ ಪರ ನಿಲ್ಲುವುದು ಕಾಂಗ್ರೆಸ್ಗೆ ಅಭ್ಯಾಸ: ರಾಹುಲ್ ಗಾಂಧಿ ವಿದೇಶ ಪ್ರವಾಸ ಕುರಿತು ಅಮಿತ್ ಶಾ ಕಿಡಿ
ಈ ಮೂವರು ವಿದ್ಯಾರ್ಥಿಗಳನ್ನೂ ವಿಶ್ವವಿದ್ಯಾಲಯ ಹೊರಹಾಕಿದೆ. ಶನಿವಾರ ರಾತ್ರಿ ಹಿರಿಯ ವಿದ್ಯಾರ್ಥಿಗಳು ಎಂಬಿಎ ಜೂನಿಯರ್ ವಿದ್ಯಾರ್ಥಿ ರಜಿತ್ ಕುಮಾರ್ ಕೊಠಡಿಗೆ ತೆರಳಿದ್ದರು. ಬಳಿಕ ಆತನನ್ನು ಇವರ ಕೋಣೆಗೆ ಬರಲು ಆದೇಶಿಸಿದರು. ಇದಕ್ಕೆ ರಜಿತ್ ಬರುವುದಿಲ್ಲ ಎಂದಿದ್ದು, ಹಿರಿಯರು ಬಲವಂತವಾಗಿ ತಮ್ಮ ಕೋಣೆಗೆ ಕರೆದೊಯ್ದರು. ಮದ್ಯ ಸೇವನೆ ಮಾಡುವಂತೆ ರಜಿತ್ ಕುಮಾರ್ ಮೇಲೆ ಒತ್ತಡ ಹೇರಿದ್ದರು. ಆತ ನಿರಾಕರಿಸಿದಾಗ ಕೋಪಗೊಂಡ ಹಿರಿಯ ವಿದ್ಯಾರ್ಥಿಗಳು ರಜಿತ್ ಕೈಗಳು ಮತ್ತು ಬೆಲ್ಟ್ ನಿಂದ ಹಲ್ಲೆ ನಡೆಸಿ ತೀವ್ರವಾಗಿ ಥಳಿಸಿದ್ದರು.
ಬಳಿಕ ರಂಜಿತ್ ಪೊಲೀಸರಿಗೆ ದೂರು ನೀಡಿದ್ದು ರ‍್ಯಾಗಿಂಗ್ ನಲ್ಲಿ ತೊಡಗಿದ್ದ ಮೂವರು ವಿದ್ಯಾರ್ಥಿಗಳಾದ ಕರಣ್ ಡೋಗ್ರಾ, ಚಿರಾಗ್ ರಾಣಾ ಮತ್ತು ದಿವ್ಯಾಂಶ್ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ವಿದ್ಯಾರ್ಥಿಗಳ ರ‍್ಯಾಗಿಂಗ್ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.