Premanand Maharaj: ಇತ್ತೀಚಿನ ದಿನಗಳಲ್ಲಿ ವಿಧ ವಿಧವಾದ ಉಡುಗೆಗೆಳು ಮಾರುಕಟ್ಟೆಗಳಿಗೆ ಕಾಲಿಡುತ್ತಿವೆ. ಟ್ರೆಂಡ್ ಲೋಕಕ್ಕೆ ಮೊದಲು ಹಾಗೂ ಹೆಚ್ಚಾಗಿ ಮಾರುಹೋಗುವುದೇ ಯುವಜನತೆ. ಬಹುತೇಕ ಹೊಸ ವಿಷಯಗಳು ಅಥವಾ ಟ್ರೆಂಡ್ಗಳು ಒಪ್ಪುವಂತದ್ದೇ. ಆದರೆ, "ಓಂ" ಸೇರಿದಂತೆ ಹಿಂದೂ ಮಂತ್ರಗಳೊಂದಿಗೆ ಡಿಸೈನ್ ಮಾಡಲಾದ ಉಡುಗೆಗಳನ್ನು ಧರಿಸುವುದು ನಿಜಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದೇ ವಿಷಯವನ್ನು ಪ್ರಸ್ತಾಪಿಸಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್, ಈ ಬಗ್ಗೆ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಮಾಸಿಕ ಪಿಂಚಣಿ ಹೆಚ್ಚಿಸಿದ ನಿತೀಶ್ ಕುಮಾರ್! ಪಿಂಚಣಿದಾರರ ಗಮನ ಸೆಳೆದ ಬಿಹಾರ ಸಿಎಂ | Monthly Pension
ಉತ್ತರ ಪ್ರದೇಶದ ವೃಂದಾವನ ಸ್ಥಳದಿಂದ ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸುವ ಪ್ರೇಮಾನಂದ ಮಹಾರಾಜ್ ಅವರು ಇತ್ತೀಚೆಗೆ ಈ ಹೊಸ ಪ್ರವೃತ್ತಿಯ ಕುರಿತು ಹಲವಾರು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು. "ಬಟ್ಟೆಗಳ ಮೇಲೆ ಅಂತಹ ಮಂತ್ರಗಳನ್ನು ಬಳಸುವುದು ಸರಿಯಲ್ಲ. ಈ ಪ್ರವೃತ್ತಿಯನ್ನು ಬೆಳೆಸಬಾರದು. ವೇದ ಮಂತ್ರಗಳನ್ನು ಭಕ್ತಿಯಿಂದ ಪಠಿಸಬೇಕೇ ವಿನಃ ಅವುಗಳನ್ನು ಬಟ್ಟೆಗಳ ಮೇಲೆ ಹಾಕಬಾರದು. ನಂಬಿಕೆ, ಪ್ರಾರ್ಥನೆ ಹೃದಯದಲ್ಲಿರಬೇಕು" ಎಂದು ಹೇಳಿದರು.
"ಪ್ರಸ್ತುತ, ಹಿಂದೂ ಧರ್ಮಗ್ರಂಥಗಳ ಶ್ಲೋಕಗಳನ್ನು ಹೊಂದಿರುವ ಬಟ್ಟೆಗಳು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ. ಬಟ್ಟೆಗಳ ಮೇಲೆ ಮಂತ್ರಗಳು ಡಿಸೈನ್ ಫ್ಯಾಷನ್ ಟ್ರೆಂಡ್ ಆಗಿ ಮಾರ್ಪಟ್ಟಿವೆ. ಅನೇಕ ಬಟ್ಟೆ ಬ್ರ್ಯಾಂಡ್ಗಳು ಮತ್ತು ಆನ್‌ಲೈನ್ ಜಾಲಗಳು, ಇಂತಹ ವೇದಗಳು ಮತ್ತು ಪುರಾಣಗಳ ಮಂತ್ರಗಳೊಂದಿಗೆ ಮುದ್ರಿಸಲಾದ ಕುರ್ತಾ ಮತ್ತು ಟಿ-ಶರ್ಟ್‌ಗಳಂತಹ ಬಟ್ಟೆಗಳನ್ನು ಮಾರಾಟ ಮಾಡುತ್ತಿವೆ. ಇದು ಸರಿಯಲ್ಲ. ಇಂಥಾ ಬಟ್ಟೆಗಳನ್ನು ಧರಿಸಬೇಡಿ" ಎಂದು ಎಚ್ಚರಿಸಿದರು.
"ಬಟ್ಟೆಗಳ ಮೇಲಿನ ಮಂತ್ರ ಸರಿಯಾದ ಮಾರ್ಗವಲ್ಲ. ಕಲಿಯುಗದಲ್ಲಿ ಅನೇಕ ಜನರು ಇಂತಹ ಬಟ್ಟೆಗಳನ್ನು ಧರಿಸಲು ಶುರು ಮಾಡಿದ್ದಾರೆ. ಮೊದಲಿಗೆ ಈ ರೀತಿಯ ವಸ್ತುಗಳನ್ನು ನಿಷೇಧಿಸಬೇಕು. ಆ ಬಟ್ಟೆಗಳ ಮೇಲೆ ವೇದ ಮಂತ್ರವಿದೆ. ಅದು ನಮ್ಮ ಹೃದಯದಲ್ಲಿ ಮಾತ್ರ ಇರಬೇಕು. ಬಟ್ಟೆಗಳ ಮೇಲಲ್ಲ. ಈ ಮಂತ್ರವನ್ನು ಗುರುಗಳಿಂದ ಕಲಿತು ಮನಸ್ಸಿನಲ್ಲಿ ಜಪಿಸಬೇಕು" ಎಂದು ಯುವಜನತೆಗೆ ಕಿವಿಮಾತು ನೀಡಿದ್ದಾರೆ,(ಏಜೆನ್ಸೀಸ್).