ಹೈದರಾಬಾದ್: ಗರ್ಭಿಣಿಯರು ತಮ್ಮ ಶಿಶುಗಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ರಾಮಾಯಣದಂತಹ ಮಹಾಕಾವ್ಯಗಳನ್ನು ಓದಲು ಪ್ರಾರಂಭಿಸಬೇಕು ಎಂದು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.
ರಾಜ್ಯಪಾಲರು ಮಾತ್ರವಲ್ಲದೆ ಸ್ತ್ರೀರೋಗತಜ್ಞರು ಮತ್ತು ಭ್ರೂಣ ಚಿಕಿತ್ಸಕರೂ ಆಗಿರುವ ಸೌಂದರರಾಜನ್ ಗರ್ಭ ಸಂಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರು ತಮ್ಮ ಶಿಶುಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಸುಂದರಕಾಂಡವನ್ನು ಪಠಿಸುವುದರ ಜತೆಗೆ ರಾಮಾಯಣದಂತಹ ಮಹಾಕಾವ್ಯಗಳನ್ನು ಓದಬೇಕು.
ಹಳ್ಳಿಗಳಲ್ಲಿ ಗರ್ಭಿಣಿಯರು ರಾಮಾಯಣ, ಮಹಾಭಾರತ ಮತ್ತು ಇತರ ಮಹಾಕಾವ್ಯಗಳ ಜೊತೆಗೆ ಒಳ್ಳೆಯ ಕಥೆಗಳನ್ನು ಓದುವುದನ್ನು ನಾವು ನೋಡಿದ್ದೇವೆ. ವಿಶೇಷವಾಗಿ ತಮಿಳುನಾಡಿನಲ್ಲಿ, ಗರ್ಭಿಣಿಯರು ರಾಮಾಯಣದ ಸುಂದರಕಾಂಡವನ್ನು ಕಲಿಯಬೇಕೆಂಬ ನಂಬಿಕೆ ಇದೆ ಎಂದು ಹೇಳಿದರು.
ಅಲ್ಲದೇ, ಗರ್ಭ ಸಂಸ್ಕಾರ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಸಂವರ್ಧಿನಿ ನ್ಯಾಸ್ರ ಪ್ರಯತ್ನಗಳನ್ನು ಶ್ಲಾಘಿಸಿ, ವೈಜ್ಞಾನಿಕ ಮತ್ತು ಸಮಗ್ರ ವಿಧಾನ ಧನಾತ್ಮಕ ಫಲಿತಾಂಶಗಳನ್ನು ಇದು ನೀಡುತ್ತದೆ ಎಂದು ಹೇಳಿದರು.
ಸುಂದರಕಾಂಡವು ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಒಂದು ಅಧ್ಯಾಯವಾಗಿದೆ. ಇದು ಭಗವಾನ್ ಹನುಮಂತನ ಸಾಹಸಗಳನ್ನು ಮತ್ತು ಅವನ ನಿಸ್ವಾರ್ಥತೆ, ಶಕ್ತಿ ಮತ್ತು ಭಗವಾನ್ ರಾಮನ ಮೇಲಿನ ಭಕ್ತಿಯನ್ನು ವಿವರಿಸುತ್ತದೆ.(ಏಜೆನ್ಸೀಸ್)