ನ್ಯೂಸ್

ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಗರ್ಭಿಣಿಯರು; 24 ಗಂಟೆಯಲ್ಲಿ 21 ಹೆರಿಗೆ!

ಆಂಧ್ರಪ್ರದೇಶ: ಒಂದಲ್ಲ...ಎರಡಲ್ಲ ಇಪ್ಪತ್ನಾಲ್ಕು ಗಂಟೆಯೊಳಗೆ ಇಪ್ಪತ್ತಕ್ಕೂ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ಬಂದಿದ್ದರು. ಬಂದವರಿಗೆಲ್ಲ ಸೂಸುತ್ರವಾಗಿ  ಹೆರಿಗೆ ಮಾಡಿಸಲಾಗಿದೆ. ಪಲ್ನಾಡು ಜಿಲ್ಲಾ ಪಿಡುಗುರಳ್ಳ ಆಸ್ಪತ್ರೆ ಅಪರೂಪದ ದಾಖಲೆ ಮಾಡಿದೆ.

ಸೋಮವಾರ ಸಂಜೆ ಐದು ಗಂಟೆಯಿಂದಲೇ ಗರ್ಭಿಣಿಯರು ಬರಲಾರಂಭಿಸಿದರು. ಹೆರಿಗೆಗೆ ಬಂದ 21 ಮಂದಿಯಲ್ಲಿ ಕೆಲವರಿಗೆ ನಾರ್ಮಲ್​​ ಡೆಲವರಿ, ಸಿಸೇರಿಯನ್ ಮಾಡಲಾಗಿದೆ. ಈ ಹಿಂದೆ ಸಿಸೇರಿಯನ್ ಮಾಡಿದವರು ಕೆಲವರಿದ್ದರು, ಹಾಗಾಗಿ ಮತ್ತೇ ಸಿಸೇರಿಯನ್ ಮಾಡಲಾಗಿದೆ.

ವೈದ್ಯ ಅಶೋಕ್ ಕುಮಾರ್ ಮಾತನಾಡಿ, 'ಪಲ್ನಾಡು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 24 ಗಂಟೆಯೊಳಗೆ ಇಷ್ಟೊಂದು ಗರ್ಭಿಣಿಯರು ಯಾವುದೇ ಆಸ್ಪತ್ರೆಗೆ ಬಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಗರ್ಭಿಣಿಯರಿಗೆ ಒಳ್ಳೆಯ ಚಿಕಿತ್ಸೆ ನೀಡಿದ್ದಾರೆ. ಹೆಚ್ಚು ಹೆಚ್ಚು ಗರ್ಭಿಣಿಯರು ಬರುತ್ತಿರುವುದನ್ನು ಗಮನಿಸಿದ ಡಾ.ರಮ್ಯಾ ಹಾರಿಕಾ ಅವರು ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲು ಕಾಲಕಾಲಕ್ಕೆ ಕ್ರಮಕೈಗೊಂಡರು. ಇಪ್ಪತ್ತೊಂದು ಜನರಲ್ಲಿ ಹನ್ನೊಂದು ಮಂದಿ ಗಂಡು ಮಕ್ಕಳಿಗೆ ಜನ್ಮ ನೀಡಿದರೆ ಉಳಿದ ಹತ್ತು ಮಂದಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ' ಎಂದು ಹೇಳಿದ್ದಾರೆ.

ಒಂದೇ ದಿನ ಹೆರಿಗೆಯಾದ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ಸಾಮಾನ್ಯವಾಗಿ ಪ್ರತಿ ತಿಂಗಳು ಎಪ್ಪತ್ತರಿಂದ ಎಂಬತ್ತು ಹೆರಿಗೆಯಾಗುತ್ತದೆ. ಆದರೆ ಸೋಮವಾರ ಸಂಜೆಯಿಂದಲೇ ಗರ್ಭಿಣಿಯರು ಸತತವಾಗಿ ಬರುತ್ತಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಯ ಎಚ್ಚರದಿಂದ ಯಾವುದೇ ತೊಂದರೆಯಾಗದಂತೆ ಸೂಕ್ತ ಸಮಯದಲ್ಲಿ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.