ಮುಂಬೈ: ಅಡ್ವರ್ಟೈಸಿಂಗ್ ಏಜೆನ್ಸೀಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಎಎಐ) ಸಂಸ್ಥೆಯ ಅಧ್ಯಕ್ಷರಾಗಿ 2023&24ನೇ ಸಾಲಿಗೆ ಗ್ರೂಪ್ ಎಂ ಮೀಡಿಯಾ ಇಂಡಿಯಾ ಪೆವೇಟ್ ಲಿಮಿಟೆಡ್ನ ದಕ್ಷಿಣ ಏಷ್ಯಾ ಸಿಇಒ ಪ್ರಶಾಂತ್ ಕುಮಾರ್ ಇತ್ತೀಚೆಗೆ ಪುನರಾಯ್ಕೆಯಾಗಿದ್ದಾರೆ. ಹವಾಸ್ ಇಂಡಿಯಾ ಗ್ರೂಪ್ ಸಿಇಒ ರಾಣಾ ಬರುವಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಮ್ಯಾಡಿಸನ್ ಕಮ್ಯುನಿಕೇಶನ್ಸ್ನ ಸ್ಯಾಮ್ ಬಲ್ಸಾರಾ, ಎವರೆಸ್ಟ್ ಬ್ರಾಂಡ್ ಸೊಲ್ಯೂಷನ್ಸ್ನ ತಾನ್ಯಾ ಗೋಯೆಲ್, ಮ್ಯಾಟ್ರಿಕ್ಸ್ ಪಬ್ಲಿಸಿಟೀಸ್ ಆ್ಯಂಡ್ ಮೀಡಿಯಾದ ವಿಷನ್ದಾಸ್ ಹರದಾಸಾನಿ, ಹವಾಸ್ ಮೀಡಿಯಾ ಇಂಡಿಯಾದ ಮೋಹಿತ್ ಜೋಶಿ, ಕ್ರೇಯಾನ್ಸ್ ಅಡ್ವರ್ಟೈಸಿಂಗ್ನ ಕುನಾಲ್ ಲಾಲಾನಿ, ಮೈತ್ರಿ ಅಡ್ವರ್ಟೈಸಿಂಗ್ ವರ್ಕ್ಸ್ನ ಚಂದ್ರಮೌಳಿ ಮುತ್ತು, ಬೀಹೈವ್ ಕಮ್ಯುನಿಕೇಶನ್ಸ್ ಶ್ರೀಧರ್ ರಾಮಸುಬ್ರಮಣ್ಯನ್, ಪ್ಲಾಟಿನಂ ಅಡ್ವರ್ಟೈಸಿಂಗ್ನ ವಿಕ್ರಮ್ ಸಖೂಜಾ, ಸ್ಲೋಕಾ ಅಡ್ವರ್ಟೈಸಿಂಗ್ನ ಕೆ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಎಎಎಐನ ನಿಕಟಪೂರ್ವ ಅಧ್ಯಕ್ಷೆಯಾಗಿದ್ದ ಪಬ್ಲಿಸಿಸ್ ಗ್ರೂಪ್ ದಕ್ಷಿಣ ಏಷ್ಯಾ ಚೀಫ್ ಎಕ್ಸಿಕ್ಯೂಟಿವ್ ಅನುಪ್ರಿಯಾ ಆಚಾರ್ಯ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್ಕುಮಾರ್, "ಸಂಸ್ಥೆ ಈಗಾಗಲೇ ಹಲವು ಸಾಧನೆಗಳನ್ನು ಮಾಡಿದ್ದರೂ, ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ. ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಸೇರಿ ಶ್ರಮಿಸೋಣ' ಎಂದು ಹೇಳಿದರು.
ಉಪಾಧ್ಯಕ್ಷ ರಾಣಾ ಬರುವಾ ಮಾತನಾಡಿ, "ಮಾಧ್ಯಮಗಳು, ಗ್ರಾಹಕರು ಮತ್ತು ಜಾಹೀರಾತು ಸಂಸ್ಥೆಗಳು ಈ ಮೂರೂ ಟಕಗಳಿಗೆ ಲಾಭ ತರುವಂತಹ ಪರಿಣಾಮಕಾರಿ ಬದಲಾವಣೆಗಳನ್ನು ಮಾಡುವ ಗುರಿ ಇದೆ. ಆ ಮೂಲಕ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪರಿವರ್ತನೆ ಸಾಧ್ಯ' ಎಂದು ತಿಳಿಸಿದರು.