ನ್ಯೂಸ್

50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ

ಚೆನ್ನೈ: ನಟ, ಡ್ಯಾನ್ಸರ್‌, ನಿರ್ದೇಶಕ, ನಿರ್ಮಾಪಕ, ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿರುವ ಪ್ರಭುದೇವ ಅವರ 2 ನೇ ಪತ್ನಿ ಹಿಮಾನಿ ಸಿಂಗ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

50ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿನ ತಂದೆ ಆಗಿದ್ದಾರೆ. ಹಿಮಾನಿ ಸಿಂಗ್‌ ಕೆಲವು ದಿನಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದು, ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ.

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು ಮೂಲತಃ ಮುಸ್ಲಿಂ ಆಗಿದ್ದು, ಮದುವೆ ನಂತರ ಹಿಂದೂ ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು. ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995 ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. 2008 ರಲ್ಲಿ ಪ್ರಭುದೇವ ಮೊದಲ ಮಗ ಕ್ಯಾನ್ಸರ್‌ ಕಾರಣದಿಂದ ನಿಧನರಾದರು. 2011ರಲ್ಲಿ ಪ್ರಭುದೇವ ಮೊದಲ ಪತ್ನಿಗೆ ಡಿವೋರ್ಸ್‌ ನೀಡಿದ್ದರು.

ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್‌ ಜೋಡಿ ತಿರುಪತಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಕ್ಯಾಮರಾ ಕಣ್ಣಿಗೆ ಸೆರೆ ಆಗಿದ್ದರು.

ಮೊದಲ ಪತ್ನಿಯಿಂದ ದೂರಾದ ನಂತರ ಒಬ್ಬಂಟಿಯಾಗೇ ಇದ್ದ ಪ್ರಭುದೇವ ಕರೋನಾ ಸಮಯದಲ್ಲಿ ಎರಡನೇ ಮದುವೆ ಆದರು. ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದ ಪ್ರಭುದೇವ ಅದೇ ಡಾಕ್ಟರನ್ನು ಪ್ರೀತಿಸಿ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆದರು.

ಅಭಿಮಾನಿಗಳಿಂದ ಭಾರತದ ಮೈಕೆಲ್ ಜಾಕ್ಸನ್ ಎಂದು ಶ್ಲಾಘಿಸಿದ ಪ್ರಭುದೇವ ಅವರು ದೇಶದ ಚಲನಚಿತ್ರ ನೃತ್ಯಗಳನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ ತಂದೆ ಸುಂದರಂ ಮತ್ತು ಸಹೋದರ ರಾಜು ಸುಂದರಂ ಅವರೊಂದಿಗೆ ತಮ್ಮ ನವೀನ ನೃತ್ಯ ಸಂಯೋಜನೆಯ ಮೂಲಕ ಇಡೀ ಭಾರತೀಯ ಚಲನಚಿತ್ರೋದ್ಯಮವನ್ನು ಆಳಿದರು. ಇದೀಗ ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.