ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಟಿ ಗೆಹನಾ ವಸಿಷ್ಠ್

gehana
Published on

ಮುಂಬೈ: ನಟಿ ಗೆಹನಾ ವಸಿಷ್ಠ್​ ಅವರು ಬಹುಕಾಲದ ಗೆಳೆಯ ಫೈಜನ್​ ಅನ್ಸಾರಿ ಅವರ ಜತೆಗೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಟಿ ಮದುವೆ ಜತೆಗೆ ಮತಾಂತರಗೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಗೆಹನಾ ವಸಿಷ್ಠ್​ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಅವರು ಚತ್ತೀಸ್​ಗಡದವರು. ನಟಿ ಗೆಹನಾ ಅವರದ್ದು ಅಂತರ್​ಧರ್ಮೀಯ ವಿವಾಹ. ಪ್ರಿಯಕರ ಫೈಜನ್​ ಅನ್ಸಾರಿ ಜೊತೆ ಮದುವೆ ಆಗಿದ್ದಾರೆ. ಅಲ್ಲದೇ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಮುಸ್ಲಿಂ ಸಂಪ್ರದಾಯದ ರೀತಿಯಲ್ಲೇ ಮದುವೆ ನಡೆದಿದೆ. ನಿಖಾ ಸಮಾರಂಭದ ಫೋಟೋಗಳು ಕೂಡ ವೈರಲ್​ ಆಗಿವೆ. ಗೆಹನಾ ವಸಿಷ್ಠ್​ ಮತ್ತು ಫೈಜನ್​ ಅನ್ಸಾರಿಯ ಮದುವೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಫೈಜನ್​ ಅನ್ಸಾರಿ ಮತ್ತು ಗೆಹನಾ ವಸಿಷ್ಠ್​ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯ ಕಾರಣಕ್ಕಾಗಿ ಅವರು ಮತಾಂತರ ಆಗಿಲ್ಲ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ. ಸೋಶಿಯಲ್​ ಮೀಡಿಯಾ ಇನ್​ಫ್ಲೂಯನ್ಸರ್​ ಆಗಿ ಫೈಜನ್​ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.

ಗೆಹನಾ ವಸಿಷ್ಠ್​  ಮಾಡೆಲ್​ ಆಗಿ ಜನಪ್ರಿಯತೆ ಈಕೆ ಹಲವಾರು ಜಾಹೀರಾತು, ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಐಟಂ ಡ್ಯಾನ್ಸರ್​ ಆಗಿಯೂ ಕಾಣಿಸಿಕೊಂಡು ಖ್ಯಾತಿ ಪಡೆದಿದ್ದಾರೆ.  ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್​ನಲ್ಲಿ ಗೆಹನಾ ಅರೆಸ್ಟ್​ ಆಗಿದ್ದರು. ನಂತರ ಅವರು ಜಾಮೀನು ಪಡೆದು ಹೊರಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net