ನ್ಯೂಸ್

ಈ ನಟಿ ಅಂದ್ರೆ ಪ್ರಭಾಸ್​ಗೆ ಇಷ್ಟವಂತೆ! ಅನುಷ್ಕಾ ಅಲ್ಲ, ಹಾಗಾದ್ರೆ ಯಾರು?

ಬೆಂಗಳೂರು: ಟಾಲಿವುಡ್​ನ ರೆಬೆಲ್ ಸ್ಟಾರ್, ಪ್ಯಾನ್ ಇಂಡಿಯಾ ನಟ ಪ್ರಭಾಸ್​ ಸದ್ಯ ಸಲಾರ್​ನ ಹಿಟ್ ನಂತರ ಇದೀಗ ಸೈನ್ಸ್​-ಫಿಕ್ಷನ್ ಆಧರಿತ ಸಿನಿಮಾ 'ಕಲ್ಕಿ 2898 ಎಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಮುಂಬರುವ ಪ್ರಾಜೆಕ್ಟ್​ಗಳಿಗಿಂತ ಈ ಚಿತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಸದ್ಯ ಸಿನಿಮಾ ಕೆಲಸಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಭಾಸ್​, ಸದಾ ಒಂದಲ್ಲ ಒಂದು ವಿಷಯಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಳೆಯುತ್ತಾರೆ. ಇದೀಗ ತಮ್ಮ ಅಭಿಪ್ರಾಯವೊಂದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಕೆಲಸಗಳ ಕುರಿತಂತೆ ಮಾತನಾಡುತ್ತಿದ್ದ ಪ್ರಭಾಸ್​ಗೆ ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಡಾರ್ಲಿಂಗ್ ಪ್ರಭಾಸ್​, 'ಪ್ರೇಮಮಂ' ನಟಿ ಸಾಯಿ ಪಲ್ಲವಿ ನನಗೆ ತುಂಬ ಇಷ್ಟವಾಗುತ್ತಾರೆ ಎಂದು ಹೇಳಿದ್ದಾರೆ.

ತೆಲುಗು ಚಿತ್ರರಂಗದ ಸಿಂಪಲ್ ನಟಿ, ಮೇಕಪ್​ ಹಾಕದೆ ಹೆಚ್ಚು ಚೆಂದ ಕಾಣುವ ನಟಿ ಸಾಯಿ ಪಲ್ಲವಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಭಾಸ್​, ಅವರ ನಟನೆ ನನಗೆ ಇಷ್ಟ ಎಂದು ಹೇಳಿದರು. ಈ ವಿಡಿಯೋ ನಟಿ ಹಾಗೂ ಪ್ರಭಾಸ್​ ಅಭಿಮಾನಿಗಳ ಮನಗೆದ್ದಿದೆ. ಸದ್ಯ ನಾಗ್ ಆಶ್ವಿನ್ ನಿರ್ದೇಶನದ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​ ಕಥೆಯನ್ನೊಳಗೊಂಡ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದಾರೆ,(ಏಜೆನ್ಸೀಸ್).