ನ್ಯೂಸ್

ಈ ಚಿತ್ರಕ್ಕೆ ಪ್ರಭಾಸ್​ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ; ಸಿನಿಮಾ ಯಾವುದು ಗೊತ್ತೆ?: ಕಾರಣ ಹೀಗಿದೆ.. | Prabhas

ಇತ್ತೀಚಿಗೆ ರೀಲಿಸ್ ಆದ ಕಲ್ಕಿ ಮತ್ತು ಸಲಾರ್​ ಸಿನಿಮಾಗಳ ಹಿಟ್​ ಬಳಿಕ ಪ್ಯಾನ್​ ಇಂಡಿಯಾ ಸೂಪರ್​ಸ್ಟಾರ್ ಪ್ರಭಾಸ್​ ಪ್ರಸ್ತುತ ಒಂದರ ಮೇಲೊಂದರಂತೆ ಸರಣಿ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ಮುಂಬರುವ ರಾಜಾ ಸಾಬ್​ ಸಿನಿಮಾದ ಶೂಟಿಂಗ್​ನಲ್ಲಿದ್ದಾರೆ. ಇದೆಲ್ಲರ ನಡುವೆ ಮತ್ತೊಂದು ಚಿತ್ರದಲ್ಲಿ ಗೆಸ್ಟ್​ರೋಲ್​ ಮಾಡಿದ್ದು, ಅದರಲ್ಲಿನ ನಟನೆಗೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ.

ಹೌದು, ಬಾಹುಬಲಿ ಸಿನಿಮಾ ಬರುವ ಮುನ್ನ ವರ್ಷಕ್ಕೆ ಒಂದು ಸಿನಿಮಾ ಮಾತ್ರ ಮಾಡಬೇಕು ಎಂದು ತಮಗೆ ತಾವೆ ಷರತ್ತು​ ಹಾಕಿಕೊಂಡಿದ್ದರು. ಆದರೆ, ಇದೀಗ ಹಾಗಿಲ್ಲ. ಇದರ ವೇಗ ಹೆಚ್ಚಿಸಿದ್ದಾರೆ. ಪ್ರಭಾಸ್​​ ಕೈಯಲ್ಲಿ ಹಲವಾರು ಚಿತ್ರಗಳಿವೆ. ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಪ್ರಭಾಸ್​ ನಟನೆಯ ಕೊನೆಯ ಚಿತ್ರಗಳು ಈಗಾಲೇ ಬಿಡುಗಡೆಯಾಗಿದ್ದು, ಮೂರನೇ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಅದು ಕೂಡ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

ಈ ಮಧ್ಯೆ ಟಾಲಿವುಡ್​ ಹಿರಿಯ ನಟ ಮೋಹನ್​ ಬಾಬು ಪುತ್ರ ಮಂಚು ವಿಷ್ಣು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್​​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿನ ನಟನೆಗಾಗಿ ಪ್ರಭಾಸ್​ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ.

ಅದಕ್ಕೆ ಕಾರಣ ಮಂಚು ವಿಷ್ಣು ಅವರ ಕುಟುಂಬವು ಪ್ರಭಾಸ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಮಂಚು ಮೋಹನ್ ಬಾಬು ಅವರನ್ನು ಪ್ರಭಾಸ್ ಅವರ ಸೋದರ ಮಾವ ಎಂದು ಕರೆಯಲಾಗುತ್ತದೆ. ಈ ಇಬ್ಬರು ಬುಜ್ಜಿಗಡು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಂಬಂಧದಿಂದಾಗಿ ಪ್ರಭಾಸ್ ಕಣ್ಣಪ್ಪ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿ ಕೂಡ ತೆಗೆದುಕೊಳ್ಳಲಿಲ್ಲ ಎನ್ನಲಾಗಿದೆ. ಇನ್ನು ಕಣ್ಣಪ್ಪ ಸಿನಿಮಾ ಕೂಡ ಶೀಘ್ರವೇ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.(ಏಜೆನ್ಸೀಸ್​)