ನ್ಯೂಸ್

ಕುಂಬಾರನಿಗೆ ಬಂತು 10 ಕೋಟಿ ರೂ. ಟ್ಯಾಕ್ಸ್​ ನೋಟಿಸ್​; ಆದಾಯ ತೆರಿಗೆ ಇಲಾಖೆ ಹೇಳಿದ್ದೇನು..? | Potter

Potter : ಮಡಿಕೆ ಮಾಡುವ ಕುಂಬಾರಿಗೆ ಏಕಾಏಕಿ 10 ಕೋಟಿ ರೂ.ಟ್ಯಾಕ್ಸ್​ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿದ ಅಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ.

ಇಲ್ಲಿನ ಬುಂಡಿ ಜಿಲ್ಲೆಯ ಝಲಿಜಿ ಕಾ ಬರಾನಾ ನಿವಾಸಿ ಕುಂಬಾರ ವಿಷ್ಣು ಪ್ರಜಾಪತ್​ಗೆ ಆದಾಯ ತೆರಿಗೆ ಇಲಾಖೆಯಿಂದ 10,61,83,000 ರೂ. ನೋಟಿಸ್​​ ಬಂದಿದ್ದು, ಆತ ಮತ್ತು ಆತನ ಕುಟುಂಬದವರು ಅಘಾತಕ್ಕೊಳಗಾಗಿದ್ದಾರೆ. ​

ಮಣ್ಣಿನ ಮಡಿಕೆಗಳನ್ನು ತಯಾರಿಸುವ ಮೂಲಕ ಬಡ ಕುಟುಂಬದ ಪಾಲನೆ ಮಾಡವುದೇ ಕಷ್ಟವಾಗಿರುವ ಸಂದರ್ಭದಲ್ಲಿ ವಿಷ್ಣುಗೆ ಈ ನೋಟಿಸ್​ ಬಂದ ತಕ್ಷಣ ಶಾಕ್​ಗೆ ಒಳಾಗಿದ್ದಾರೆ.

ತೆರಿಗೆ ನೋಟಿಸ್​ನಲ್ಲಿದೆ..?

ಮುಂಬೈನಲ್ಲಿ ವಿಷ್ಣು ತನ್ನ ಪ್ಯಾನ್ ಕಾರ್ಡ್ ಬಳಸಿ ವಜ್ರ ಮತ್ತು ಚಿನ್ನದ ವ್ಯಾಪಾರ ಕಂಪನಿಯನ್ನು ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಟ್ರೇಡಿಂಗ್ ಕಂಪನಿಯು ಕೋಟ್ಯಂತರ ರೂಪಾಯಿ ಮೌಲ್ಯದ ಜಿಎಸ್‌ಟಿ ಮತ್ತು ಆದಾಯ ತೆರಿಗೆಯನ್ನು ವಂಚಿಸಿರುವುದರಿಂದ ನೋಟಿಸ್ ಅಗತ್ಯವಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ವಿಷ್ಣು ಪ್ರಜಾಪತ್​ ಹೇಳೊದೇನು..?

ನನ್ನ ಪ್ಯಾನ್​​ ಕಾರ್ಡ್​ ಬಳಸಿಕೊಂಡು(ದುರುಪಯೋಗ) ತೆರೆಗೆ ವಂಚನೆ ಮಾಡಿದ್ದಾರೆ. ವಂಚಕರು ತಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಮಾರ್ಚ್ 19, 2020 ರಂದು ಮುಂಬೈನ ಮಿರ್ಗಾಂವ್‌ನಲ್ಲಿ 'ಭೂಮಿಕಾ ಟ್ರೇಡಿಂಗ್' ಎಂಬ ಕಂಪನಿಯನ್ನು ರಚಿಸಿದ್ದಾರೆ ಎಂದು ಪ್ರಜಾಪತ್​ ಮಾಧ್ಯಮಗಳಿಗೆ ಹೇಳಿದರು. ಅಲ್ಲದೆ, ಏಕಮಾಲೀಕತ್ವ ಸಂಸ್ಥೆಯ ಜಿಎಸ್‌ಟಿ ನೋಂದಣಿಯನ್ನು ಅವರ ದಾಖಲೆಗಳೊಂದಿಗೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಕುರಿತು ಈಗಾಲೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.

ಆದಾಗ್ಯೂ, ಆದಾಯ ತೆರಿಗೆ ಇಲಾಖೆಯು ವಿಷ್ಣುವಿಗೆ ನೋಟಿಸ್‌ಗೆ ಉತ್ತರಿಸಲು ಮಾರ್ಚ್ 31ರರೆಗೆ ಗಡುವು ನೀಡಿತ್ತು. ವಿಷ್ಣು ತಮ್ಮ ವಾರ್ಷಿಕ ಆದಾಯ ಕೇವಲ 95,000 ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದು ಅವರ ಮೊದಲ ಆದಾಯ ತೆರಿಗೆ ಸಲ್ಲಿಕೆಯಾಗಿದೆ. ಈ ನಡುವೆ ತನಿಖೆ ಆರಂಭವಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)