ನ್ಯೂಸ್

ಜನಪ್ರಿಯ ಪಂಜಾಬಿ ಹಾಸ್ಯನಟ ಜಲ್ವಿಂದರ್​ ಭಲ್ಲಾ ಇನ್ನಿಲ್ಲ! | Jaswinder Bhalla

Jaswinder Bhalla: ಜನಪ್ರಿಯ ಪಂಜಾಬಿ ಹಾಸ್ಯನಟ ಜಲ್ವಿಂದರ್​ ಭಲ್ಲಾ (65) ಮೆದುಳು ಪಾಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಶುಕ್ರವಾರ (ಆ.22) ಬೆಳಗಿನ ಜಾವ 4 ಗಂಟೆಗೆ ಮೊಹಲಿಯ ಫೋರ್ಟಿಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ, ಭಲ್ಲಾ ಅವರ ಅಂತ್ಯಕ್ರಿಯೆ ಆಗಸ್ಟ್​ 23ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ಸ್ಮಶಾನದಲ್ಲಿ ನಡೆಯಲಿದೆ. ಇವರ ಸಾವಿನ ಸುದ್ದಿ ತಿಳಿದ ತಾರಾರಂಗ ಅಂತಿಮ ದರ್ಶನ ಪಡೆಯಲು ಅವರ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಭಲ್ಲಾ ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಅವರು ಅಡ್ವೋಕೇಟ್​ ಧಿಲ್ಲೋನ್​ ಎಂದು ಪ್ರಸಿದ್ಧರಾದರು. ಇವರು ಅನೇಕ ಸೂಪರ್​ಹಿಟ್​ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ತಮ್ಮ ಪಾತ್ರದ ಮೂಲಕ ನ್ಯಾಯ ಒದಗಿಸಿದ್ದಾರೆ.

ಆರಂಭಿಕ ಜೀವನ

ಜಲ್ವಿಂದರ್​ ಭಲ್ಲಾ ಲುಧಿಯಾನ ನಗರದಲ್ಲಿ 4 ಮೇ 1960 ರಲ್ಲಿ ಜನಿಸಿದರು . ಅವರ ತಂದೆ ಮಾಸ್ಟರ್ ಬಹದ್ದೂರ್ ಸಿಂಗ್ ಭಲ್ಲಾ ಬರ್ಮಾಲಿಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಇವರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಹಾಗೂ ಎಂಎಸ್ಸಿ ಪದವಿ ಪಡೆದರು. ಹಾಗೂ ಮೀರತ್‌ನ ಚೌಧರಿ ಚರಣ್ ಸಿಂಗ್ ಸ್ನಾತಕೋತ್ತರ ಕಾಲೇಜಿನಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಚಲನಚಿತ್ರಗಳು

ಭಲ್ಲಾ ಅವರು ಅನೇಕ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದು, ರಂಗೀಲೆ, ಜಾಟ್​& ಜೂಲಿಯೆಟ್​ 2, ಸ್ಟುಪಿಡ್​ 7, ಜಿಗರ್ ದ ತುಕ್ಡಾ, ಸರ್ದಾರ್ಜಿ 3, ಸಾಮ್ನಾ, ನೌಕರ್ ವಹುತಿ ದಾ ದಂತಹ ಅನೇಕ ಚಲನಚಿತ್ರಗಳಲ್ಲಿ ತಮ್ಮ ಮೆರಗನ್ನು ಮೂಡಿಸಿದ್ದಾರೆ. ( ಏಜೆನ್ಸೀಸ್​)