ನ್ಯೂಸ್

ಅನಂತ್​-ರಾಧಿಕಾರನ್ನು ಹರಸಲು ಬಂತು ರಾಜಕೀಯ ನಾಯಕರ ದಂಡು; ಯಾರ್‍ಯಾರು ಭಾಗಿ? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನೆರವೇರಿದ್ದು, ಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಶುರುವಾಗುವುದಕ್ಕೂ ಮುಂಚಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ.

ಮದುವೆ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಅತಿಥಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ನವ ದಂಪತಿಗೆ ಆಶೀರ್ವದಿಸಿದರು. ಅಂಬಾನಿ ಮಗನ ಮದುವೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಾಯಕರು ಭಾಗಿಯಾಗಿದ್ದರು. ಶನಿವಾರ ಕೂಡ ಮದುವೆ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿವಾಹದಲ್ಲಿ ಭಾಗವಹಿಸಿದ್ದರು. ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ (ಶರದ್ ಪವಾರ್) ಹಿರಿಯ ನಾಯಕಿ ಸುಪ್ರಿಯಾ ಸುಲೆ ಪಾಲ್ಗೊಂಡಿದ್ದಾರೆ.

ಅನಂತ್​-ರಾಧಿಕಾ ಮದುವೆಯಲ್ಲಿ ಹಿರಿಯ ಕಾಂಗ್ರೆಸ್​​​ ನಾಯಕರಾದ ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಅಜಯ್ ಮಾಕನ್, ಸಲ್ಮಾನ್ ಖುರ್ಷಿದ್, ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜೀವ್ ಶುಕ್ಲಾ ಭಾಗಿಯಾಗಿದ್ದರು. ಎನ್‌ಡಿಎ ಪಕ್ಷದ ಪ್ರಮುಖ ನಾಯಕರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಮತ್ತು ಆರ್‌ಪಿಐ ನಾಯಕ ರಾಮದಾಸ್ ಅಠಾವಳೆ ನವದಂಪತಿಗೆ ಶುಭ ಹಾರೈಸಿದ್ದಾರೆ.