ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಾದಕವಾಗಿ ರೀಲ್ಸ್​ ಮಾಡಿದ ಯುವತಿ; ಈಕೆ ವರ್ತನೆಗೆ ಕಿಡಿಕಾರಿದ ನೆಟ್ಟಿಗರು

Reels

ಗ್ವಾಲಿಯರ್: ಸಾಮಾಜಿಕ ಜಾಲತಾಣದ ಯುಗದಲ್ಲಿ ಯುವ ಪೀಳಿಗೆಯೂ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಿದರು ದಿನದಿಂದ ದಿನಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿರುತ್ತವೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಂದಿಯ ಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮಧ್ಯಪ್ರದೇಶದ ಗ್ವಾಲಿಯರ್​ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬಳು ಹಿಂದಿಯ ಪ್ರಸಿದ್ದ ಹಾಡು ಟಿಪ್​ ಟಿಪ್​ ಬರ್ಸಾ ಪಾನಿ ಹಾಡಿಗೆ ಬೋಲ್ಡ್​​ಆಗಿ ಸೊಂಟ ಬಳುಕಿಸಿದ್ದಾಳೆ. ಹಾಡಿನಲ್ಲಿ ಆಕೆ ರವೀನಾ ಟಂಡನ್​ರನ್ನು ಅನುಕರಣೆ ಮಾಡಲು ಮುಂದಾಗಿದ್ದು, ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವರು ಯುವತಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅವಳಿ ಹೆಣ್ಣು ಮಕ್ಕಳ ತಂದೆ ನಾನಲ್ಲ ಎಂದ ಪತಿ; ನವಜಾತ ಶಿಶುಗಳ ಕತ್ತು ಸೀಳಿ ಕೊಂದ ತಾಯಿ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಯುವತಿಯ ಡ್ಯಾನ್ಸ್​ ವಿಡಿಯೋ ವೈರಲ್​ ಆಗುತ್ತಿದ್ದಂತೆ ಗ್ವಾಲಿಯರ್‌ನ ಯುವ ಸಾಮಾಜಿಕ ಕಾರ್ಯಕರ್ತ ಆಕಾಶ್ ಬರುವಾ ಪೊಲೀಸರಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಈ ರೀತಿ ವಿಡಿಯೋಗಳು ಐತಿಹಾಸಿಕ ಸ್ಥಳಗಳ ಮೇಲೆ ನೆಗೆಟಿವ್ ಬ್ರ್ಯಾಂಡಿಂಗ್ ಮಾಡುವುದಲ್ಲದೆ ಯುವಕರಿಗೆ ತಪ್ಪು ಸಂದೇಶ ರವಾನೆ ಮಾಡುತ್ತವೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತ ವಿಡಿಯೋಗೆ ಕಮೆಂಟ್​ ಮಾಡಿರುವ ನೆಟ್ಟಿಗರು ಗ್ವಾಲಿಯರ್ ಕೋಟೆ,​ ಬೈಜ್ತಾಲ್ ಅಥವಾ ಇಟಾಲಿಯನ್ ಗಾರ್ಡನ್​ನಂತಹ ಜಾಗಗಳನ್ನು ಬಿಟ್ಟು ಜಿಲ್ಲಾಧಿಕಾರಿ ಕಚೇರಿ ಯಾಕೆ ಆಯ್ಕೆ ಮಾಡಿಕೊಂಡ್ರಿ ನಿಮ್ಮ ಈ ಕೃತ್ಯದಿಂದ ಕೆಟ್ಟ ಹೆಸರು ಬರುತ್ತದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿ ಕಿಡಿಕಾರಿದ್ದಾರೆ.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…