ನ್ಯೂಸ್

ನಟ ನಾಗಶೌರ್ಯ ಫಾರ್ಮ್​ಹೌಸ್​ನಲ್ಲಿ ಗ್ಯಾಂಬ್ಲಿಂಗ್​; 25 ಮಂದಿಯ ಬಂಧನ, 25 ಲಕ್ಷ ರೂ. ವಶಕ್ಕೆ..

ಹೈದರಾಬಾದ್​: ತೆಲುಗಿನ ಖ್ಯಾತ ನಟ ನಾಗಶೌರ್ಯ ಫಾರ್ಮ್​ಹೌಸ್​ ಮೇಲೆ ದಾಳಿ ಮಾಡಿರುವ ಪೊಲೀಸರು 25 ಮಂದಿಯನ್ನು ಬಂಧಿಸಿದ್ದು, 25 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆಯೇ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಫಾರ್ಮ್​ಹೌಸ್​ನಲ್ಲಿನ 25 ಮಂದಿ ಮಾತ್ರವಲ್ಲದೆ, ಸಮಾಜದಲ್ಲಿ ಇತರ 20 ಗಣ್ಯರನ್ನೂ ವಶಕ್ಕೆ ಪಡೆದಿರುವ ಮಾಹಿತಿ ಇದೆ.

ಕಾರ್ಡ್​ ಸ್ವೈಪಿಂಗ್ ಮಷಿನ್ ಇಟ್ಟುಕೊಂಡು ಜೂಜಾಟ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ 25 ಲಕ್ಷ ರೂಪಾಯಿ ನಗದು ಲಭಿಸಿದ್ದು, ಜೂಜಾಟದಲ್ಲಿ ಪಾಲ್ಗೊಂಡಿದ್ದ 25 ಮಂದಿಯನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬರ ಫೋನ್​ ಕೂಡ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿನ ಮಾಹಿತಿ ಆಧಾರದ ಮೇಲೆ ಮತ್ತಷ್ಟು ಕಾರ್ಯಾಚರಣೆ ನಡೆಯಲಿದೆ.

ಹೈದರಾಬಾದ್​ನ ಈ ಫಾರ್ಮ್​ಹೌಸ್​ ತೆಲುಗಿನ ಖ್ಯಾತನಟ ನಾಗಶೌರ್ಯ ಅವರಿಗೆ ಸೇರಿರುವುದು ತಿಳಿದುಬಂದಿದೆ. ಅಲ್ಲದೆ ನಾಗಶೌರ್ಯ ಅವರು ಇದನ್ನು ನಿವೃತ್ತ ಐಎಎಸ್​ ಅಧಿಕಾರಿಯೊಬ್ಬರಿಂದ ಆರು ತಿಂಗಳ ಲೀಸ್​ಗೆ ಪಡೆದಿರುವ ಮಾಹಿತಿಯೂ ಹೊರಬಿದ್ದಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ನಾಗಶೌರ್ಯ ಪ್ರತಿಕ್ರಿಯೆ ಇನ್ನೂ ಬಹಿರಂಗಗೊಂಡಿಲ್ಲ. -ಏಜೆನ್ಸೀಸ್​