ನ್ಯೂಸ್

ಪಿಒಕೆ ನಮ್ಮ ದೇಶದ್ದು, ಇದು ಸೂಕ್ತ ಸಮಯ.. ಮೊದಲು ವಶಪಡಿಸಿಕೊಳ್ಳಿ; ಕೇಂದ್ರ ಸರ್ಕಾರಕ್ಕೆ ಅಸಾದುದ್ದೀನ್​ ಓವೈಸಿ ಸಲಹೆ | POK

POK: ಪಹಲ್ಗಾಮ್​ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಂಡಿದೆ. ನೀವು ಇನ್ನು ಕಠಿಣಕ್ರಮಕೈಗೊಳ್ಳುವುದಾದರೆ ಪಾಕ್​ ಆಕ್ರಮಿತ ಕಾಶ್ಮೀರ(ಪಿಒಕೆ)ಪ್ರದೇಶವನ್ನು ವಶಪಡಿಸಿಕೊಳ್ಳಿ ಎಂದು ಸಂಸದ ಅಸಾದುದ್ದೀನ್​ ಓವೈಸಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹೈದರಾಬಾದ್​ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಕಿಸ್ತಾನಿ ಸೈನಿಕರು ಹುದ್ದೆಗಳನ್ನು ಖಾಲಿ ಮಾಡುತ್ತಿರುವುದು ಮತ್ತು ಕುಟುಂಬಗಳು ಲಂಡನ್‌ಗೆ ಪಲಾಯನ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಬಂದಿರುವ ವರದಿಗಳಿಗೆ ನಿಜವಾದರೆ ಅದು ತುಂಬಾ ಒಳ್ಳೆಯದು. ಪಿಒಕೆ ಖಾಲಿ ಮಾಡಿದ್ದರೆ ನಾವು ಆ ಜಾಗವನ್ನು ವಶಪಡಿಸಿಕೊಳ್ಳಬೇಕು. ಅದು ನಮ್ಮ(ಭಾರತ) ದೇಶಕ್ಕೆ ಸೇರಿದೆ. ಈ ಸ್ಥಳವನ್ನು ವಶಪಡಿಸಿಕೊಳ್ಳಲು ಇದು ಸೂಕ್ತ ಸಮಯ, ಈ ಬಾರಿ ಪಿಒಕೆ ಅನ್ನು ನಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಹೇಳಿದರು.

ನರೇಂದ್ರ ಮೋದಿಯವರ "ಘರ್ ಮೇ ಘುಸ್ ಕೆ ಮಾರೇಂಗೆ" (ನಾವು ಅವರ ಬಳಿಗೆ ಹೋಗಿ ಹೊಡೆಯುತ್ತೇವೆ) ಎಂಬ ವಾಕ್ಚಾತುರ್ಯದ ಬದಲು, ಭಾರತವು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಓವೈಸಿ ಬಿಜೆಪಿ ನೇತೃತ್ವದ ಭಾರತ ಸರ್ಕಾರಕ್ಕೆ ಒತ್ತಾಯಿಸಿದರು.

"ಪಿಒಕೆ ನಮ್ಮದು ಎಂದು ಭಾರತದ ಸಂಸತ್ತಿನಲ್ಲಿ ಈಗಾಗಲೇ ನಿರ್ಣಯವಿದೆ. ಈ ಹೀಗಾಗಿ, ಈ ಬಾರಿ ಕ್ರಮ ಕೈಗೊಳ್ಳಿ" ಎಂದು ಓವೈಸಿ ಒತ್ತಿ ಹೇಳಿದರು.(ಏಜೆನ್ಸೀಸ್​)