ನ್ಯೂಸ್

VIDEO| ದೆಹಲಿ ವಿಶ್ವವಿದ್ಯಾಲಯ ಶತಮಾನೋತ್ಸವ; OTT ಕುರಿತು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ

Webdesk - Manjunatha B

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾರ್ಯಕ್ರಮದ ನಿಮಿತ್ತ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದು, ಪ್ರಯಾಣಿಕರ ಜೊತೆಗಿನ ಚರ್ಚೆ ಮಾಡಿರುವ ಹಲವು ವಿಚಾರಗಳ ಕುರಿತು ಟ್ವೀಟ್​ ಮಾಡಿ ತಿಳಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಪ್ರಧಾನಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇಲ್ಲಿನ ವಿದ್ಯಾರ್ಥಿಗಳ ತರಹ ನಾನು ಇಂದು ಮೆಟ್ರೋದಲ್ಲಿ ಪ್ರಯಾಣಿಸಿದೆ. ವಿಜ್ಞಾನ ಸೇರಿದಂತೆ OTT ಪ್ಲ್ಯಾಟ್​ಫಾರ್ಮ್​ಗಳಲ್ಲಿ ಬಿಡುಗಡೆಯಾಗಿರುವ ಹೊಸ ಸರಣಿಗಳ ಬಗ್ಗೆಯು ತಿಳಿದುಕೊಂಡಿರುತ್ತಾರೆ.

ಇತ್ತೀಚಿಗೆ ಯಾವ ಚಿತ್ರವನ್ನು ನೋಡಿದೆ. OTTಯಲ್ಲಿ ಯಾವ ವೆಬ್​ ಸೀರಿಸ್​ ಚೆನ್ನಾಗಿದೆ, ಹೊಸ ರೀಲ್ಸ್​ ನೋಡಿದೆಯಾ ಎಂಬುದರ ಕುರಿತು ವಿದ್ಯಾರ್ಥಿಗಳ ಬಳಿ ಚರ್ಚಸಿಲು ಹಲವು ವಿಚಾರಗಳಿವೆ.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರ ಜೊತೆ ಪ್ರಧಾನಿ ಮೋದಿ ಸಂವಹನ ನಡೆಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.