PM Modi: ಜೀವನದಲ್ಲಿ ತಾವು ಅನುಭವಿಸಿದ ಬದುಕು, ಬಾಲ್ಯ, ರಾಜಕೀಯ ಸೇರಿದಂತೆ ಹಲವು ರೋಚಕ, ಕುತೂಹಲಕಾರಿ ವಿಷಯಗಳ ಕುರಿತು ಮೂರು ಗಂಟೆಗಳ ಪಾಡ್ಕಾಸ್ಟ್ನಲ್ಲಿ ಮನಬಿಚ್ಚಿ ಮುಕ್ತವಾಗಿ ಮಾತನಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೃತಕ ಬುದ್ಧಿ ಮತ್ತೆ ಸಂಶೋಧಕರು ಹಾಗೂ ಪಾಡ್ಕಾಸ್ಟರ್ ಆದ ಲೆಕ್ಸ್ ಫ್ರಿಡ್ಮನ್ ಜತೆಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ನಾಯಕತ್ವ, ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಶಿಸ್ತು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಮೋದಿ ಹಂಚಿಕೊಂಡಿದ್ದಾರೆ.
"ನನ್ನ ಶಕ್ತಿ ಮೋದಿ ಎಂಬ ಹೆಸರಿನಲ್ಲಿಲ್ಲ. ಬದಲಿಗೆ ದೇಶದ 140 ಕೋಟಿ ಭಾರತೀಯರಲ್ಲಿದೆ. ವಿಶ್ವದ ನಾಯಕರೊಂದಿಗೆ ನಾನು ಕೈಮಿಲಾಯಿಸುತ್ತಿದ್ದೇನೆ ಎಂದರೆ, ಅದು ನಾನೊಬ್ಬನೇ ಅಲ್ಲ. ಇಡೀ ಭಾರತೀಯರು ನನ್ನೊಂದಿಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದಾರೆ ಎಂದರ್ಥ. ಭಾರತ ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಅವರಂತಹ ಪುಣ್ಯಾತ್ಮರಿದ್ದ ಭೂಮಿ. ನಾವು ಸಂಘರ್ಷವನ್ನು ಬಯಸುವುದಿಲ್ಲ. ನಾವು ಸಾಮರಸ್ಯ ಪರ ನಿಲ್ಲುತ್ತೇವೆ. ಎಲ್ಲೆಲ್ಲಿ ನಾವು ಶಾಂತಿಪ್ರಿಯರಾಗಿ ಕಾರ್ಯನಿರ್ವಹಿಸಬಹುದೋ ಅಲ್ಲೆಲ್ಲ ನಾವು ಆ ಜವಾಬ್ದಾರಿಯನ್ನು ಸ್ವೀಕರಿಸುತ್ತೇವೆ" ಎಂದರು.
ಆರಂಭಿಕ ಜೀವನ ಮತ್ತು ಸವಾಲುಗಳು ತಮ್ಮ ಬಾಲ್ಯದ ಬೆಳವಣಿಗೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ನಾವು ಹೋಲಿಕೆಯ ಬದುಕು ಕಾಣದ ಹಿನ್ನೆಲೆ ಎಂದಿಗೂ ಬಡತನದ ಹೊರೆಯನ್ನು ಅನುಭವಿಸಲಿಲ್ಲ. ನೀವು ಶೂಗಳನ್ನು ಧರಿಸಿಲ್ಲದಿದ್ದರೆ, ಅವುಗಳನ್ನು ಕಳೆದುಕೊಂಡಾಗ ಉಂಟಾಗುವ ಅನುಭವ ನಿಮಗೆ ಗೊತ್ತಿರುವುದಿಲ್ಲ" ಎಂದು ಹೇಳಿದರು.
"ಪಾಕ್ನೊಂದಿಗೆ ಶಾಂತಿ ಸ್ಥಾಪಿಸುವ ಪ್ರತಿಯೊಂದು ಪ್ರಯತ್ನಕ್ಕೂ ಹಗೆತನ ಮತ್ತು ವಂಚನೆ ಎದುರಾಯಿತು. ಇಸ್ಲಾಮಾಬಾದ್‌ನಲ್ಲಿನ ನಾಯಕತ್ವವು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುತ್ತದೆ. 2014ರಲ್ಲಿ ನಾನು ಪ್ರಮಾಣವಚನ ಸ್ವೀಕರಿಸುವಾಗ ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಸದ್ಭಾವನೆಯ ಸಂಕೇತವಾಗಿ ಪ್ರಮಾಣವಚನಕ್ಕೆ ಬರುವಂತೆ ಆಹ್ವಾನಿಸಿದ್ದೆ. ಇಲ್ಲಿ ಎರಡೂ ದೇಶಗಳ ನಡುವೆ ಶಾಂತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿತ್ತು. ಪ್ರತಿಯೊಂದು ಉದಾತ್ತ ಪ್ರಯತ್ನಕ್ಕೂ ಹಗೆತನ ಮತ್ತು ದ್ರೋಹ ಎದುರಾಯಿತು" ಎಂದರು.
"ಬುದ್ಧಿವಂತಿಕೆ ಮೇಲುಗೈ ಸಾಧಿಸಿತ್ತು. ಪಾಕಿಸ್ತಾನಿಯರು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದ ಜನರು ಸಹ ನಡೆಯುತ್ತಿರುವ ಅಶಾಂತಿ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಸಹಿಸಿಕೊಳ್ಳುತ್ತಿದ್ದಾರೆ. ಶಾಂತಿಗಾಗಿ ಹಪಾಹಪಿ ನಡೆಸುತ್ತಿದ್ದಾರೆ. ಹಿಂಸಾತ್ಮಕತೆಯಿಂದ ಅವರೆಲ್ಲರೂ ಬೇಸತ್ತಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).