WPL 2025: ನಿನ್ನೆ (ಮಾ.15) ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಮೂರನೇ ಬಾರಿಗೆ ಹೀನಾಯ ಸೋಲು ಕಂಡಿದ್ದು ತಂಡದ ಆಟಗಾರರನ್ನು ಭಾವುಕರನ್ನಾಗಿಸಿತು.
ಇದನ್ನೂ ಓದಿ: ಆಫೀಸರ್ ಕೈಯಿಂದ ತಪ್ಪಿಸಿಕೊಳ್ಳಲು ಲಂಚದ ಹಣದೊಂದಿಗೆ ಕೆರೆಗೆ ಹಾರಿದ ಭ್ರಷ್ಟ ಅಧಿಕಾರಿ! ಹಣಕ್ಕಾಗಿ ಶೋಧ | Bribe
ಕಳೆದ ಬಾರಿಯೂ ಫೈನಲ್ ತಲುಪಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸೃತಿ ಮಂದಾನ ನಾಯಕತ್ವದ ಆರ್ಸಿಬಿ ಎದುರು ಸೋಲುಂಡಿತು. ಈ ಮೂಲಕ ಡಬ್ಲ್ಯೂಪಿಎಲ್ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡಿತು. ಇನ್ನು ಈ ವರ್ಷವಾದರೂ ಗೆದ್ದು, ಟ್ರೋಫಿ ಎತ್ತುವ ಕನಸು ಕಂಡಿದ್ದ ಡೆಲ್ಲಿಗೆ, ಅಂತಿಮ ಹಣಾಹಣಿಯಲ್ಲಿ ಭಾರೀ ನಿರಾಶೆ ಮೂಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಮರಿಜಾನ್ನೆ ಕಪ್ಪ್, ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟರು.
ಸತತ ಮೂರನೇ ಬಾರಿ ಫೈನಲ್ ತಲುಪಿ, ಮೂರನೇ ಬಾರಿಯೂ ಟ್ರೋಫಿ ಗೆಲ್ಲದೆ ಹೋಗಿದ್ದು, ಮರಿಜಾನ್ನೆ ದುಃಖಕ್ಕೆ ಕಾರಣವಾಯಿತು. ಲೀಗ್ ಆರಂಭದಿಂದಲೂ ತಂಡದ ಪರ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ್ದ ಆಟಗಾರ್ತಿ, 2025ರ ಡಬ್ಲ್ಯೂಪಿಎಲ್ ಪ್ರಶಸ್ತಿಯನ್ನು ತಂಡಕ್ಕೆ ಗೆಲ್ಲಿಸಿಕೊಡಲು ವಿಫಲರಾದರು. 8 ರನ್ಗಳಿಂದ ಫೈನಲ್ ಗೆದ್ದ ಮುಂಬೈ ಇಂಡಿಯನ್ಸ್, ಎರಡನೇ ಬಾರಿಗೆ ಡಬ್ಲ್ಯೂಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮರಿಜಾನ್ನೆ ಕಣ್ಣೀರಿಟ್ಟ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).
‘ಅಪ್ಪು’ಗೆ ಹೆಚ್ಚಿದ ‘ಅಭಿ’ಮಾನಿಗಳ ಅಪ್ಪುಗೆ; ರೀ-ರಿಲೀಸ್ ಚಿತ್ರ ಕಣ್ತುಂಬಿಕೊಂಡ ಮೋಹಕತಾರೆ ರಮ್ಯ | Appu