ನ್ಯೂಸ್

VIDEO | ಪಾಟ್ನಾ ಸಾಹಿಬ್‌ಗೆ ಮೋದಿ ಭೇಟಿ; ಅಡುಗೆ ತಯಾರಿಸಿ, ಭಕ್ತರಿಗೆ ಊಟ ಬಡಿಸಿದ ಪ್ರಧಾನಿ

ಪಾಟ್ನಾ: ಇಂದು ಪಾಟ್ನಾ ನಗರದ ತಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಾವೇ ತಯಾರಿಸಿದ ಅಡುಗೆಯನ್ನು ಊಟಕ್ಕೆಂದು ಬಂದ ಭಕ್ತರಿಗೆ ಬಡಿಸಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಮೂಲಕ ಅನೇಕರ ಸಂತಸಕ್ಕೆ ಕಾರಣರಾಗಿದ್ದಾರೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸ್ಥಳದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ.

ತಖತ್ ಶ್ರೀ ಪಾಟ್ನಾ ಸಾಹಿಬ್ ಅನ್ನು ತಖತ್ ಶ್ರೀ ಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದೂ ಕರೆಯುತ್ತಾರೆ. ಇದು ರಾಜ್ಯದ ರಾಜಧಾನಿಯಲ್ಲಿರುವ ಸಿಖ್ಖರ ಐದು ತಖತ್‌ಗಳಲ್ಲಿ ಒಂದಾಗಿದೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ತಖತ್ ನಿರ್ಮಾಣವನ್ನು ನಿಯೋಜಿಸಿದರು.

ರಾಜ್ಯ ರಾಜಧಾನಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಒಂದು ದಿನದ ಬಳಿಕ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ, ಬಿಹಾರದಲ್ಲಿ ರೋಡ್‌ಶೋ ನಡೆಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್‌ನಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).