ನ್ಯೂಸ್

ತೂತ್ತುಕುಡಿ ಎಂಬ ಮುತ್ತಿನಗರಿಯ 'ಪೊನ್​ ಮರಿಯಪ್ಪನ್​' ಎಂಬ ಮುತ್ತನ್ನು ಜಗತ್ತಿಗೇ ಪರಿಚಯಿಸಿದ್ರು ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಾಡಿಕೆಯಂತೆ ಈ ಬಾರಿಯೂ ಪ್ರೇರಣಾದಾಯಿ ವ್ಯಕ್ತಿಯೊಬ್ಬರನ್ನು ಮನ್​ ಕೀ ಬಾತ್ ಮೂಲಕ ಜಗತ್ತಿಗೆ ಪರಿಚಯಿಸಿದ್ರು. ತೂತ್ತುಕುಡಿಯ ಪೊನ್ ಮರಿಯಪ್ಪನ್ ಎಂಬ ವ್ಯಕ್ತಿಯನ್ನು ಅವರು ಮನ್ ಕೀ ಬಾತ್ ಮೂಲಕ ಜಗತ್ತಿಗೆ ಪರಿಚಯಿಸಿದ ಬಗೆ ಇದು.

‘Learning is Growing’ ಎಂದು ಹೇಳಲಾಗುತ್ತದೆ. ಇಂದು ನಾನು ನಿಮಗೆ, ವಿಶಿಷ್ಠ ಹುಮ್ಮಸ್ಸು ಹೊಂದಿರುವ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಡುತ್ತೇನೆ. ಇತರರೊಂದಿಗೆ ಓದುವ ಮತ್ತು ಕಲಿಯುವ ಹುಮ್ಮಸ್ಸು ಹಂಚಿಕೊಳ್ಳುವ ಅಭ್ಯಾಸ ಇವರಲ್ಲಿದೆ. ಇವರು ಪೊನ್ ಮರಿಯಪ್ಪನ್, ತಮಿಳುನಾಡಿನ ತೂತ್ತುಕುಡಿಯಲ್ಲಿ ಇರುತ್ತಾರೆ.

ತೂತ್ತುಕುಡಿ ಪರ್ಲ್ ಸಿಟಿ ಅಂದರೆ ಮುತ್ತಿನ ನಗರಿಯೆಂದೂ ಪ್ರಸಿದ್ಧವಾಗಿದೆ. ಒಂದೊಮ್ಮೆ ಇದು ಪಾಂಡ್ಯನ್ ಸಾಮ್ರಾಜ್ಯದ ಮಹತ್ವಪೂರ್ಣ ಕೇಂದ್ರವಾಗಿತ್ತು. ಇಲ್ಲಿರುವ ನನ್ನ ಸ್ನೇಹಿತ ಪೊನ್ ಮರಿಯಪ್ಪನ್, ಕ್ಷೌರಿಕ ವೃತ್ತಿಯಲ್ಲಿ ನಿರತರಾಗಿದ್ದು ಸಲೂನ್ ನಡೆಸುತ್ತಿದ್ದಾರೆ. ಒಂದು ವಿಶಿಷ್ಟ ಮತ್ತು ಪ್ರೇರಣಾತ್ಮಕ ಕೆಲಸವನ್ನು ಇವರು ಮಾಡಿದ್ದಾರೆ. ಸಲೂನಿನ ಒಂದು ಭಾಗವನ್ನು ಗ್ರಂಥಾಲಯ ಮಾಡಿದ್ದಾರೆ. ಯಾರೇ ಆಗಲಿ ಸಲೂನ್ ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವಾಗ ಏನಾದರೂ ಓದುತ್ತಾರೆ, ಓದಿರುವ ಬಗ್ಗೆ ಏನಾದರೂ ಬರೆಯುತ್ತಾರಾದರೆ ಅಂಥ ಗ್ರಾಹಕರಿಗೆ ಪೊನ್ ಮರಿಯಪ್ಪನ್ ರಿಯಾಯಿತಿ ನೀಡುತ್ತಾರೆ. ಇದು ಆಸಕ್ತಿಕರವಲ್ಲವೇ.

ಪೊನ್ ಮರಿಯಪ್ಪನ್ ಜನರ ಕೇಶವಿನ್ಯಾಸವನ್ನಂತೂ ಮಾಡುತ್ತಾರೆ, ಜತೆಗೆ ಜೀವನ ವಿನ್ಯಾಸಕ್ಕೂ ಅವಕಾಶ ನೀಡಿದ್ದಾರೆ. ತಿರುಕ್ಕುರುಳ್ ನ ಜನಪ್ರಿಯತೆ ಗಮನಿಸಿ ಬಹಳ ಸಂತೋಷವಾಯಿತು. ಭಾರತದ ಎಲ್ಲ ಭಾಷೆಗಳಲ್ಲೂ ತಿರುಕ್ಕುರುಳ್ ಲಭ್ಯವಿದೆ. ಸ್ನೇಹಿತರೇ, ಜ್ಞಾನವನ್ನು ಪಸರಿಸುವ ಮೂಲಕ ಅಪಾರ ಸಂತೋಷ ಪಡೆದುಕೊಳ್ಳುವ ಅನೇಕ ಮಂದಿ ಭಾರತದಾದ್ಯಂತ ಇದ್ದಾರೆ. ಓದಬೇಕೆಂದು ಪ್ರತಿಯೊಬ್ಬರೂ ಪ್ರೇರೇಪಿತರಾಗಬೇಕೆಂದು ಬಯಸುವ ಜನರು ಇವರಾಗಿದ್ದಾರೆ. ನ ಹೀ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ ಎಂಬುದನ್ನು ನೆನಪಿಡಬೇಕು.

ಗುಜರಾತ್ ನ ಭಾವನಗರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ 2 ಸಂಸ್ಥೆಗಳ ಬಗ್ಗೆ ಕೂಡಾ ತಿಳಿದುಕೊಂಡಿದ್ದೇನೆ. ಅವುಗಳಲ್ಲಿ ಒಂದು ‘ವಿಕಾಸ್ ವರ್ತುಲ್ ಟ್ರಸ್ಟ್’. ಇಂತಹದ್ದೇ ಒಂದು ಸಂಸ್ಥೆ ‘ಪುಸ್ತಕ್ ಪರಬ್. ಇದೊಂದು ನವೀನ ಯೋಜನೆಯಾಗಿದ್ದು, ಸಾಹಿತ್ಯಾತ್ಮಕ ಪುಸ್ತಕಗಳೊಂದಿಗೆ ಮತ್ತೊಂದು ಪುಸ್ತಕವನ್ನು ಉಚಿತವಾಗಿ ಒದಗಿಸುತ್ತದೆ. ಈ ಗ್ರಂಥಾಲಯದಲ್ಲಿ ಆಧ್ಯಾತ್ಮಿಕ, ಆಯುರ್ವೇದ ಚಿಕಿತ್ಸೆ ಮತ್ತು ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಕೂಡಾ ಇವೆ.