More

    ಜಗತ್ತಿನಾದ್ಯಂತ ಮಲ್ಲಕಂಬ ಜನಪ್ರಿಯಗೊಳ್ಳುತ್ತಿದೆ ನೋಡಿ..

    ನವದೆಹಲಿ: ಸ್ವಾಭಿಮಾನ, ಸ್ವಾವಲಂಬನೆ ವಿಚಾರದಲ್ಲಿ ನಾವು ಕಲಿಯಬೇಕಾದ್ದು ಬಹಳಷ್ಟಿದೆ. ನಮ್ಮದನ್ನು ನಾವು ಪ್ರೀತಿಸತೊಡಗಿದಾಗ ಜಗತ್ತು ಕೂಡ ಅದನ್ನು ಪ್ರೀತಿಸತೊಡಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನಾವು ಗಮನಿಸಬಹುದು, ಉಲ್ಲೇಖಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಮನ್​ ಕೀ ಬಾತ್​ನಲ್ಲಿ ಹೇಳಿದರು.

    ನಿಮಗೆ ನೀವೇ ಸವಾಲು ಹಾಕಿ!

    ನಮ್ಮ ದೇಶದಲ್ಲಿ ಹಲವು ಸಮರ ಕಲೆಗಳಿವೆ. ನಮ್ಮ ಯುವ ಸ್ನೇಹಿತರು ಇವುಗಳ ಬಗ್ಗೆಯೂ ತಿಳಿಯಲಿ, ಇವುಗಳನ್ನು ಕಲಿಯಲಿ ಮತ್ತು ಸಮಯಕ್ಕೆ ತಕ್ಕಂತೆ ಹೊಸ ಆವಿಷ್ಕಾರವನ್ನೂ ಮಾಡಲಿ ಎಂದು ಆಶಿಸುತ್ತೇನೆ.ನಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳು ಎದುರಾಗದಿದ್ದಲ್ಲಿ, ವ್ಯಕ್ತಿತ್ವದ ಸರ್ವೋತ್ಕೃಷ್ಟತೆ ಹೊರಹೊಮ್ಮುವುದಿಲ್ಲ. ಆದ್ದರಿಂದ, ಎಂದಿಗೂ ನಿಮಗೆ ನೀವೇ ಸವಾಲು ಹಾಕಿಕೊಳ್ಳುತ್ತಿರಿ.

    ಯಾವಾಗ ನಮ್ಮ ವಸ್ತುಗಳ ಮೇಲೆ ನಮಗೆ ಅಭಿಮಾನ ಇರುವುದೋ ಆಗ ವಿಶ್ವದಲ್ಲೂ ಅವುಗಳ ಬಗ್ಗೆ ಕುತೂಹಲ, ಜಿಜ್ಞಾಸೆ ಮೂಡುತ್ತದೆ.ನಮ್ಮ ದೇಶದ ಆಧ್ಯಾತ್ಮ, ಯೋಗ, ಆಯುರ್ವೇದ ಸಂಪೂರ್ಣ ವಿಶ್ವವನ್ನು ಆಕರ್ಷಿಸಿದಂತೆ ನಮ್ಮ ಹಲವಾರು ಕ್ರೀಡೆಗಳೂ ವಿಶ್ವವನ್ನು ಆಕರ್ಷಿಸುತ್ತಿವೆ. ಈ ಮಧ್ಯೆ ನಮ್ಮ ಮಲ್ಲಕಂಬವೂ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

    ಇದನ್ನೂ ಓದಿ:  ಚೀನಾದ ವಿರುದ್ಧ ಭಾರತ ಸೇನೆ ಮತ್ತಷ್ಟು ಸಜ್ಜಾಗಿರಬೇಕು; ಆರ್​ಎಸ್​ಎಸ್​ ಮುಖ್ಯಸ್ಥ ಭಾಗವತ್​

    ಅಮೆರಿಕದಲ್ಲಿ ಚಿನ್ಮಯ ಪಾಠನ್ಕರ್ ಮತ್ತು ಪ್ರಜ್ಞಾಪಾಠನ್ಕರ್ ತಮ್ಮ ಮನೆಯಲ್ಲೇ ಮಲ್ಲಕಂಬ ಕಲಿಯಲಾರಂಭಿಸಿದ್ದ ವೇಳೆ ಇಷ್ಟೊಂದು ಸಫಲತೆ ಸಿಗುವುದೆಂಬ ಅರಿವು ಅವರಿಗೂ ಇರಲಿಲ್ಲ.ಇಂದು ಅಮೆರಿಕದಲ್ಲಿ ಬಹಳಷ್ಟು ಸ್ಥಳಗಳಲ್ಲಿ ಮಲ್ಲಕಂಬ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ದೊಡ್ಡ ಸಂಖ್ಯೆಯಲ್ಲಿ ಅಮೆರಿಕದ ಯುವಜನತೆ ಮಲ್ಲಕಂಬ ಕಲಿಯುತ್ತಿದ್ದಾರೆ.

    ಇದನ್ನೂ ಓದಿ:  LIVE|ಮನ್​ ಕೀ ಬಾತ್: ಗೋ ಲೋಕಲ್ ಸಂದೇಶ ನೀಡ್ತಿದ್ದಾರೆ ಪ್ರಧಾನಿ ಮೋದಿ

    ಇಂದು ಜರ್ಮನಿ, ಪೋಲಂಡ್​, ಮಲೇಷ್ಯಾ ಸೇರಿ 20 ಬೇರೆ ದೇಶಗಳಲ್ಲಿ ಮಲ್ಲಕಂಬ ಜನಪ್ರಿಯವಾಗುತ್ತಿದೆ. ಈಗಂತೂ ಇದರ ವಿಶ್ವ ಚಾಂಪಿಯನ್ ಶಿಪ್ ಕೂಡ ಆರಂಭವಾಗಿದೆ. ಇದರಲ್ಲಿ ಹಲವಾರು ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಕೂಡ. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಅಸಾಧಾರಣ ವಿಕಾಸವನ್ನು ಮೂಡಿಸುವಂತಹ ಇಂಥ ಹಲವಾರು ಕ್ರೀಡೆಗಳು ಇವೆ.ಇವು ಮನಸ್ಸು ಮತ್ತು ದೇಹದ ಸಮತೋಲನವನ್ನು ಒಂದು ನೂತನ ಆಯಾಮಕ್ಕೆ ಕೊಂಡೊಯ್ಯುತ್ತವೆ.ಆದರೆ ಹೊಸ ಪೀಳಿಗೆಯ ನಮ್ಮ ಯುವಜನತೆ ಮಲ್ಲಕಂಬಕ್ಕೆ ಅಷ್ಟೊಂದು ಪರಿಚಿತರಾಗಿರಲಿಕ್ಕಿಲ್ಲ. ಇದನ್ನು ಅಂತರ್ಜಾಲದಲ್ಲಿ ಹುಡುಕಿ ಮತ್ತು ನೋಡಿ.

    ಮಹಾರಾಷ್ಟ್ರ ಸಿಎಂ ಮತ್ತು ಅವರ ಪುತ್ರನ ವಿರುದ್ಧ ಟ್ವೀಟ್​ ಮಾಡಿದ್ದ ಬಿಜೆಪಿ ಕಾರ್ಯಕರ್ತನ ಮರುಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts