More

    ಚೀನಾದ ವಿರುದ್ಧ ಭಾರತ ಸೇನೆ ಮತ್ತಷ್ಟು ಸಜ್ಜಾಗಿರಬೇಕು; ಆರ್​ಎಸ್​ಎಸ್​ ಮುಖ್ಯಸ್ಥ ಭಾಗವತ್​

    ನವದೆಹಲಿ: ಭಾರತದ ಸೇನೆ ಚೀನಾದ ವಿರುದ್ಧ ಮತ್ತಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿದ್ದಾರೆ. ಆರ್​ಎಸ್ಎಸ್​ನ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿರುವ ವಿಜಯದಶಮಿ ಆಚರಣೆಯಲ್ಲಿ ಅವರು ಮಾತನಾಡುತ್ತ ಈ ವಿಷಯ ಪ್ರಸ್ತಾಪಿಸಿದರು.

    ಗ್ಯಾಲ್ವನ್​ ಕಣಿವೆಯಲ್ಲಿ ನಡೆದಿದ್ದ ಇಂಡೋ-ಚೈನಾ ಗಡಿ ಸಂಘರ್ಷದಲ್ಲಿ ಭಾರತ ನೀಡಿದ್ದ ದಿಟ್ಟ ಪ್ರತಿಕ್ರಿಯೆ ವಿಷಯವನ್ನು ಉಲ್ಲೇಖಿಸಿದ ಅವರು, ಚೀನಾ ಅದನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಅದು ಹೇಗೆ ಪ್ರತ್ಯುತ್ತರ ನೀಡಬಹುದು ಎಂಬುದು ನಮಗೆ ಗೊತ್ತಿಲ್ಲ. ಹೀಗಾಗಿ ಭಾರತೀಯ ಸೇನೆ ಹೆಚ್ಚು ಸಜ್ಜಾಗಿರಬೇಕು. ಸೇನೆ ಮಾತ್ರವಲ್ಲ, ಆರ್ಥಿಕ ಪರಿಸ್ಥಿತಿ, ಅಂತಾರಾಷ್ಟ್ರೀಯ ಸಂಬಂಧ ಎಲ್ಲದರಲ್ಲೂ ಹೆಚ್ಚು ಉತ್ತಮಗೊಳ್ಳಬೇಕಿದೆ. ಮಾತ್ರವಲ್ಲ ಚೀನಾದ ವಿರುದ್ಧ ನೆರೆ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ ಮುಂತಾದವುಗಳ ಜತೆ ಶಕ್ತಿಶಾಲಿ ಮೈತ್ರಿ ಇಟ್ಟುಕೊಂಡಿರಬೇಕು ಎಂದರು.

    ಹಿಂದುತ್ವ ಭಾರತದ ಮೂಲ ಎಂದ ಅವರು, ಹಿಂದುತ್ವವನ್ನು ಮಾರ್ಗದರ್ಶಿ ಆಗಿಸುವ ನಿಟ್ಟಿನಲ್ಲಿ ಮುಂದಾದರೆ ಭವಿಷ್ಯದಲ್ಲಿ ಅದು ಜಗತ್ತಿಗೇ ಬೆಳಕು ತೋರಲಿದೆ ಎಂದು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts