More

    LIVE|ಮನ್​ ಕೀ ಬಾತ್: ಗೋ ಲೋಕಲ್ ಸಂದೇಶ ನೀಡ್ತಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಮನ್​ ಕೀ ಬಾತ್​ನಲ್ಲಿ ಗೋ ಲೋಕಲ್ ಗೆ ಒತ್ತು ನೀಡಿ ಮಾತನಾಡಿದ್ದು, ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತೀಯರೆಂಬ ವಿಷಯದ ಸುತ್ತವೇ ಜೋಡಿಸಲ್ಪಟ್ಟಿದೆ.ಸ್ವಾಭಿಮಾನ ಹೇಗಿರಬೇಕು, ಸ್ವಾವಲಂಬನೆ ಏನೆಂಬುದನ್ನು ಸೂಚ್ಯವಾಗಿ ವಿವರಿಸುತ್ತ ಹೋಗಿದ್ದಾರೆ.ಅವರ ಮಾತಿನ ಸಾರ ಇಲ್ಲಿದೆ. ನೇರ ಪ್ರಸಾರದ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ.

    ಕೋವಿಡ್ 19 ವಿರುದ್ಧ ನಾವು ಹೋರಾಟ ನಡೆಸುತ್ತ ಹಬ್ಬವನ್ನೂ ಆಚರಿಸುತ್ತಿದ್ದೇವೆ. ಸಂಕಷ್ಟ ಕಾಲದಲ್ಲಿ ತಾಳ್ಮೆಯ ಗೆಲುವು ಈ ಸಲದ ದಸರಾ ವಿಶೇಷವೂ ಹೌದು.ಈ ಸಂಕಷ್ಟ ಸಮಯದಲ್ಲಿ ಸ್ವಾವಲಂಬಿ ಭಾರತ, ಆತ್ಮನಿರ್ಭರ ಭಾರತ ನಿರ್ಮಾಣವನ್ನು ಮರೆಯಬೇಡಿ.ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಹಬ್ಬಗಳ ಈ ಉತ್ಸಾಹ ಮತ್ತು ಮಾರುಕಟ್ಟೆಯ ಈ ಆಕರ್ಷಣೆ ಒಂದಕ್ಕೊಂದು ಮಿಳಿತವಾಗಿವೆ. ಆದರೆ ಈ ಬಾರಿ ಖರೀದಿಸುವಾಗ, ‘ವೋಕಲ್ ಫಾರ್ ಲೋಕಲ್’ ಎಂಬ ಸಂಕಲ್ಪ ನೆನಪಿರಲಿ. ನಮ್ಮ ಬದುಕಿನಲ್ಲಿ ಸ್ಥಳೀಯರ ಪಾತ್ರ ಏನು ಎಂಬುದನ್ನು ಅರಿತಿದ್ದೇವೆ. ಕಷ್ಟಕಾಲದಲ್ಲಿ ಎಲ್ಲರೂ ಜತೆಗಿದ್ದೆವು. ಹಬ್ಬಗಳ ಖುಷಿ ಸಂತೋಷದಲ್ಲೂ ಅವರನ್ನು ಜತೆಗೆ ಭಾಗಿಯಾಗಿಸಿಕೊಳ್ಳೋಣ. ಇವೆರೆಲ್ಲರನ್ನೂ ಕುಟುಂಬದ ಸದಸ್ಯರಂತೆ ಕಾಣಬೇಕು ಎಂಬುದು ನನ್ನ ಆಗ್ರಹ.

    ಇದನ್ನೂ ಓದಿ:  ಚೀನಾದ ವಿರುದ್ಧ ಭಾರತ ಸೇನೆ ಮತ್ತಷ್ಟು ಸಜ್ಜಾಗಿರಬೇಕು; ಆರ್​ಎಸ್​ಎಸ್​ ಮುಖ್ಯಸ್ಥ ಭಾಗವತ್​

    ನಾವು ಸ್ಥಳೀಯ ವಸ್ತುಗಳ ಪರವಾಗಿ ಧ್ವನಿ ಎತ್ತುತ್ತಿರುವಾಗ ವಿಶ್ವವೂ ನಮ್ಮ ಸ್ಥಳೀಯ ವಸ್ತುಗಳ ಅಭಿಮಾನ ಬೆಳೆಸಿಕೊಳ್ಳುತ್ತಿರುವುದನ್ನು ಇಂದು ಕಾಣಬಹುದು. ನಮ್ಮ ಬಹಳಷ್ಟು ಸ್ಥಳೀಯ ವಸ್ತುಗಳಿಗೆ ಜಾಗತಿಕ ಮಟ್ಟಕ್ಕೇರುವ ಸಾಮರ್ಥ್ಯವಿದೆ. ಉದಾಹರಣೆಗೆ ಖಾದಿಯನ್ನೇ ನೋಡಿ.

    ನಮ್ಮ ಸ್ಥಳೀಯ ಉತ್ಪನ್ನಗಳ ವಿಶೇಷತೆ ಏನು ಅಂದರೆ ಅವುಗಳ ಜತೆಗೆ ಒಂದು ಅದ್ಭುತವಾದ ಸ್ಥಳೀಯ ದರ್ಶನವೂ
    ಬೆಸೆದುಕೊಂಡಿರುತ್ತದೆ ಇವು ರಾಮರಾಜ್ಯಕ್ಕೆ ಸಂಬಂಧಿಸಿದ ಮಾತುಗಳಾಗಿದ್ದು, ಜನರ ಅವಶ್ಯಕತೆಗಳನ್ನು ನೀವು ಪೂರೈಸಿದರೆ ಅವರು ನಿಮ್ಮೊಂದಿಗೆ ಬೆರೆಯುತ್ತಾರೆ.

    ಉತ್ತರ ಪ್ರದೇಶದಲ್ಲೂ ಬಾರಾಬಂಕಿಯಲ್ಲಿ ಸುಮನ್ ದೇವಿ ಎಂಬ ಓರ್ವ ಮಹಿಳೆ ಇದ್ದಾರೆ. ಸುಮನ್ ಅವರು ತಮ್ಮ ಸ್ವಸಹಾಯ ಗುಂಪಿನ ಇತರ ಮಹಿಳೆಯರೊಡಗೂಡಿ ಖಾದಿ ಮಾಸ್ಕ್​ ಗಳನ್ನು ತಯಾರಿಸಲಾರಂಭಿಸಿದರು.ಕಾಲಾನುಕ್ರಮದಲ್ಲಿ ಅವರೊಂದಿಗೆ ಇತರ ಮಹಿಳೆಯರೂ ಸೇರಿಕೊಂಡರು. ಈಗ ಅವರೆಲ್ಲ ಸೇರಿ ಸಾವಿರಾರು ಖಾದಿ ಮುಖಗವಸುಗಳನ್ನು ತಯಾರಿಸುತ್ತಿದ್ದಾರೆ.ಹೀಗೆಯೇ, ದೇಶಾದ್ಯಂತ ಬಹಳ ಸ್ಥಳಗಳಲ್ಲಿ ಸ್ವಸಹಾಯ ಗುಂಪುಗಳು ಮತ್ತು ಬೇರೆ ಸಂಸ್ಥೆಗಳು ಖಾದಿ ಮುಖಗವಸುಗಳನ್ನು ತಯಾರಿಸುತ್ತಿವೆ.

    ಇದೇ ರೀತಿ ಇನ್ನೊಂದು ನಿದರ್ಶನ ಗಮನಿಸಿ. ದೆಹಲಿಯ ಕನ್ನಾಟ್ ಪ್ಲೇಸ್ ನ ಖಾದಿ ಅಂಗಡಿ ಒಂದಿದೆ. ಅಲ್ಲಿ ಈ ಬಾರಿ ಗಾಂಧಿ ಜಯಂತಿಯ ಒಂದೇ ದಿನ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆದಿದೆ. ಹೀಗೆ ಕೊರೊನಾ ಸಮಯದಲ್ಲಿ ಖಾದಿ ಮಾಸ್ಕ್ ಗಳು ಬಹಳ ಜನಪ್ರಿಯವಾಗುತ್ತಿವೆ.

    ಜಗತ್ತಿನಾದ್ಯಂತ ಮಲ್ಲಕಂಬ ಜನಪ್ರಿಯಗೊಳ್ಳುತ್ತಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts