More

    ಕರೊನಾ ಮೆಟ್ಟಿ ನಿಲ್ಲೋಣ, ಕೊರೋನಾ ಸುಟ್ಟು ಸಾಗೋಣ …

    ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದವರಿಗೆ ಧೈರ್ಯ ತುಂಬಲು, ಫ್ರಂಟ್​ಲೈನ್​ ವಾರಿಯರ್ಸ್​ಗೆ ಧನ್ಯವಾದ ಹೇಳಲು ಹಲವು ವಿಡಿಯೋ ಹಾಡುಗಳು ಇದುವರೆಗೂ ಬಿಡುಗಡೆಯಾಗಿವೆ. ಈಗ ಆ ಸಾಲಿಗೆ ‘ಹೆದರದಿರು ಓ ಮನವೇ …’ ಸಹ ಸೇರಿದೆ.

    ಇದನ್ನೂ ಓದಿ: ಎರಡೇ ಪಾತ್ರಗಳ‌ ‘ಅನಿರೀಕ್ಷಿತ’ ಟ್ರೇಲರ್​ಗೆ ಸೆಲೆಬ್ರಿಟಿಗಳ ಮೆಚ್ಚುಗೆ

    ಕರೋನಾದಿಂದಾಗಿ ಸೃಷ್ಟಿಯಾಗಿರುವ ಸಂಕಷ್ಟಕ್ಕೆ ಸಿಲುಕಿದ ಮಾನವ ಸಂಕುಲಕ್ಕೆ ಧೈರ್ಯ ಹೇಳಿ ಸಾಂತ್ವಾನ ಹೇಳುವಂತ ‘ಹೆದರದಿರು ಓ ಮನವೇ … ಕೊರೋನಾ ಮೆಟ್ಟಿ ನಿಲ್ಲೋಣ, ಕೊರೋನಾ ಸುಟ್ಟು ಸಾಗೋಣ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ, ನಟ ಮತ್ತು ನಿರ್ಮಾಪಕರೂ ಆಗಿರುವ ಮಹೇಂದ್ರ ಮುನ್ನೋತ್ ಈ ಹಾಡನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್​. ಜೈರಾಜ್​ ಮತ್ತು ಕಾರ್ಯದರ್ಶಿ ಭಾ.ಮಾ. ಹರೀಶ್​ ಹ ಹಾಜರಿದ್ದರು.

    ಈ ಹಾಡಿಗೆ ನಿರ್ದೇಶಕ ಹರಿಹರನ್ ಆಕ್ಷನ್ ಕಟ್ ಹೇಳಿದರೆ, ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಚಿನ್​ ಎಸ್​ ನಗರ್ತ ಈ ಹಾಡನ್ನು ಹಾಡಿದ್ದಾರೆ. ಈ ಹಾಡು, ಮಹೇಂದ್ರ ಮುನ್ನೋತ್ ಅವರ ನಿತ್ಯ ಜೀವನದ ಸಮಾಜ ಮುಖಿ ಕಾರ್ಯವನ್ನು ಬಿಂಬಿಸಿದೆ.

    ಇದನ್ನೂ ಓದಿ: ದೀಪಾವಳಿಗೆ ‘ಅಣ್ಣಾತ್ತೆ’ಯಾದರೆ, ದಸರಾಗೆ ‘ಆಚಾರ್ಯ’ …

    ಇದೇ ಸಂಧರ್ಭದಲ್ಲಿ ‘ಆತ್ಮ‌ನಿರ್ಭರ ಭಾರತ’ ಎನ್ನುವ ಗೀತೆಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಸಹ ಬಿಡುಗಡೆ ಮಾಡಲಾಗಿದೆ. ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ರವರ ಸಂಗೀತದಲ್ಲಿ ಈ ಹಾಡು ಮೂಡಿಬಂದಿದ್ದು, ಕೊರೋನ ವಾರಿಯರ್ಸ್​ಗೆ ಅರ್ಪಣೆ ಮಾಡಲಾಗಿದೆ. ಈ ಹಾಡಿನಲ್ಲೂ ಮಹೇಂದ್ರ ಮುನ್ನೋತ್ ಕಾಣಿಸಿಕೊಂಡಿದ್ದು, ಹಲವು ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಹೊಸ ಮನೆಗೆ ಬಂದ ರಾಧಿಕಾ-ಯಶ್​ ದಂಪತಿ: ಗೃಹಪ್ರವೇಶ ಸಡಗರದ ಫೋಟೋಗಳು ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts