ದೀಪಾವಳಿಗೆ 'ಅಣ್ಣಾತ್ತೆ'ಯಾದರೆ, ದಸರಾಗೆ 'ಆಚಾರ್ಯ' ...

Acharya - Final
Published on

ಹೈದರಾಬಾದ್​: ರಜನಿಕಾಂತ್​ ಅಭಿನಯದ 'ಅಣ್ಣಾತ್ತೆ' ಚಿತ್ರವು ದೀಪಾವಳಿಗೆ ಬಿಡುಗಡೆಯಾಗುತ್ತದೆ ಎಂಬ ಸುದ್ದಿಯೊಂದು, ಅವರ ಅಭಿಮಾನಿಗಳನ್ನು ಸಖತ್​ ಖುಷಿಪಡಿಸಿದೆ. ಈಗ ಚಿರಂಜೀವಿ ಅಭಿಮಾನಿಗಳನ್ನು ಖುಷಿಪಡಿಸುವ ಸುದ್ದಿಯೊಂದು ಕೇಳಿಬಂದಿದ್ದು, 'ಆಚಾರ್ಯ' ಚಿತ್ರ ದಸರಾಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು, ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವು ದಸರಾ ಸಮಯದಲ್ಲಿ ಅಂದರೆ, ಅಕ್ಟೋಬರ್​ 15ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಬಂದಿದೆ. ಆದರೆ, ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಮುಗಿಸಿ, ಆ ನಂತರ ಚಿತ್ರತಂಡವು ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ.

ಅಂದಹಾಗೆ, 'ಆಚಾರ್ಯ' ಚಿತ್ರದ ಬಾಕಿ ಇರುವ ಚಿತ್ರೀಕರಣ ಜುಲೈ 07ರಿಂದ ಪ್ರಾರಂಭವಾಗುತ್ತಿದೆ. ಒಂದು ಹಾಡು, ಒಂದು ಫೈಟ್​ ಜತೆಗೆ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಮುಂದಿನ ಒಂದು ತಿಂಗಳಲ್ಲಿ ಬಾಕಿ ಇರುವ ಚಿತ್ರೀಕರಣವನ್ನು ಮುಗಿಸುವುದಕ್ಕೆ ನಿರ್ದೇಶಕ ಕೊರಟಾಲ ಶಿವ ಸ್ಕೆಚ್​ ಹಾಕಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್​ನಲ್ಲಿ ಚಿತ್ರೀಕರಣ ಸಂಪೂರ್ಣವಾದ ನಂತರ ಬಾಕಿ ಕೆಲಸಗಳನ್ನೆಲ್ಲ ಮುಗಿಸಿಕೊಂಡು, ಅಕ್ಟೋಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಐಡಿಯಾ ಎಂದು ಹೇಳಲಾಗುತ್ತಿದೆ.

'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಜತೆಗೆ ಅವರ ಮಗ ರಾಮ್​ಚರಣ್​ ತೇಜ ಸಹ ನಟಿಸುತ್ತಿದ್ದು, ಕಾಜಲ್​ ಅಗರ್​ವಾಲ್​, ಪೂಜಾ ಹೆಗ್ಡೆ, ಸೋನು ಸೂದ್​ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net