ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಮೂಲಕ ಆಗಾಗ ದೇಶದ ವಿವಿಧ ಭಾಗದ ಜನರೊಂದಿಗೆ, ಸಾಧಕರೊಂದಿಗೆ ಆನ್ಲೈನ್ನಲ್ಲಿ ಮಾತುಕತೆ ನಡೆಸುತ್ತಿರುತ್ತಾರೆ. ಆದರೆ ಇಂದು ಅವರು ಸಾಧಕರನೇಕರ ಜತೆ ನೇರವಾಗಿ ಸಂವಾದ ನಡೆಸಿದ್ದಾರೆ.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿರುವ ಶಿಕ್ಷಕರು ಇಂದು ದೆಹಲಿಯಲ್ಲಿ ಇಂಥದ್ದೊಂದು ಅವಕಾಶಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆ ಆದ ದೇಶದ ವಿವಿಧ ಭಾಗಗಳ ಶಿಕ್ಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್ಬ್ಯಾಗ್ನಲ್ಲಿ ನಾಗರಹಾವು!
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾಗಿರುವ ನಮ್ಮ ರಾಷ್ಟ್ರದ ಆದರ್ಶಪ್ರಾಯ ಶಿಕ್ಷಕರನ್ನು ಭೇಟಿಯಾದೆ. ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಅವರ ಸಮರ್ಪಣೆ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಗೆ ಅವರ ಅಚಲ ಬದ್ಧತೆ ಬಹಳ ಸ್ಫೂರ್ತಿದಾಯಕ. ತಮ್ಮ ತರಗತಿಗಳ ಮೂಲಕ ಅವರು ಭಾರತದ ಯುವಕರ ಉಜ್ವಲ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.