ಬೆಂಗಳೂರು: ಲಾಕ್ಡೌನ್ ನಿರ್ಬಂದ ಸಡಿಲಿಸದ ಬಳಿಕ ರಾಜ್ಯಾದ್ಯಂತ ಬಸ್ ಸಂಚಾರ ಶುರುವಾಗಿದೆ. ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಮಗೆ ತಿಳಿದಿರಲಿ, ವೀಕೆಂಡ್ನಲ್ಲಿ ಊರಿಗೆ ಹೋಗೋ ಪ್ಲಾನ್ ನಿಮ್ಮದಾಗಿದ್ದರೆ ಮೊದಲೇ ಸಜ್ಜಾಗಿ ಏಕೆಂದರೆ ಭಾನುವಾರ ಬಸ್ ರೈಲು ಸಂಚಾರವಿರಲ್ಲ. ಜತೆಗೆ, ಖಾಸಗಿ ವಾಹನಗಳು ಕೂಡ ರಸ್ತೆಗೆ ಇಳಿಯುವಂತಿಲ್ಲ. ಅಂದು ಸಂಪೂರ್ಣ ಲಾಕ್ಡೌನ್ ಇರಲಿದೆ ಎಂದು ಈಗಾಗಲೇ ರಾಜ್ಯ ಸಕಾ್ರ ಆದೇಶ ಹೊರಡಿಸಿದೆ.
ಇದಲ್ಲದೇ, ಪ್ರತಿದಿನವೂ ರಾತ್ರಿ ಏಳು ಗಂಟೆಯಿಂದ ಬೆಳಗಿನ ಏಳು ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ದೂರದ ಊರುಗಳಿಗೆ ತೆರಳುವ ಬಸ್ಗಳು ಬೆಳಗ್ಗೆಯೇ ಹೊರಟಿರುತ್ತವೆ. ಹತ್ತಿರದ ಊರುಗಳಿಗೆ ಮಧ್ಯಾಹ್ನದವರೆಗೂ ಬಸ್ಗಳು ಸಂಚರಿಸಬಹುದು. ಹೀಗಾಗಿ ಶನಿವಾರಕ್ಕೆ ನಿಮ್ಮ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಿ.
ಖಾಸಗಿ ವಾಹನಗಳಿಗೂ ಅವಕಾಶವಿಲ್ಲ: ಭಾನುವಾರ (ಮೇ 24) ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರಲಿದೆ. ಇಲ್ಲಿ ಯಾವುದೇ ವಿನಾಯ್ತಿಗಳಿಲ್ಲ. ಅತ್ಯಾವಶ್ಯಕ ಸೇವೆಯನ್ನು ಹೊರತುಪಡಿಸಿ ಬೇರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಬಸ್, ಹಾಗೂ ರೈಲು ಸಂಚಾರ ಬಂದ್. ಅಲ್ಲದೇ, ಖಾಸಗಿ ವಾಹನಗಳಲ್ಲಿಯೂ ಹೊರಗೆ ತೆರಳುವಂತಿಲ್ಲ.
ಪ್ರಯಾಣಕ್ಕೂ ಮುನ್ನ ಕೆಲ ಅಗತ್ಯ ಮುನ್ನೆಚ್ಚರಿಕೆಗಳನ್ನು ಪ್ರಯಾಣಿಕರೇ ತೆಗೆದುಕೊಳ್ಳುವುದು ಉತ್ತಮ. ಮಾಸ್ಕ್ ಧರಿಸುವುದು ಕಡ್ಡಾಯ. ನಿಲ್ದಾಣದಲ್ಲಿ ಕೊಡುತ್ತಾರಾ ಇಲ್ಲವೂ ನೀವೇ ಚಿಕ್ಕದೊಂದು ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಳ್ಳಿ. ಬಸ್ ಹತ್ತುವ ಮುನ್ನ ಹಾಗೂ ಇಳಿದ ಬಳಿಕ ಕೈಗಳಲ್ಲಿನ ಸೋಂಕು ನಿವಾರಣೆ ಮಾಡಿಕೊಳ್ಳಿ. ಜ್ವರವಿದ್ದರೆ ಪ್ರಯಾಣದಿಂದ ದೂರವಿರಿ. ಇದು ನಿಮಗೂ ಹಾಗೂ ಇತರ ಪ್ರಯಾಣಿಕರಿಗೂ ಒಳ್ಳೆಯದು.
ಇನ್ನು, ರೈಲುಗಳಲ್ಲಿ ಸಂಚರಿಸುವವರು ತಮ್ಮ ಬಳಿಯಿರುವ ಸ್ಮಾರ್ಟ್ಫೋನ್ಗಳಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು. ರೈಲಿನಲ್ಲಿ ಆಹಾರ ಪೂರೈಕೆ ಇರಲ್ಲ. ಹೊದಿಕೆಗಳನ್ನು ನೀಡಲ್ಲ. ಹೀಗಾಗಿ ಇದನ್ನೆಲ್ಲ ನೀವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ದೂರ ಪ್ರಯಾಣದ ಬಸ್ಗಳಲ್ಲಿ ತೆರಳುವವರು ಊಟ, ಉಪಾಹಾರ ಜತೆಗೆ ಕೊಂಡೊಯ್ದರೆ ಉತ್ತಮ.