ನ್ಯೂಸ್

ಬಟ್ಟೆ ಅಂಗಡಿಯ ಟ್ರಯಲ್ ರೂಂ ಒಳಗೆ ಹೋಗುವ ಮುನ್ನ ಎಚ್ಚರ!; ಈ ಸುದ್ದಿ ಓದಿ..

ತಮಿಳುನಾಡು: ಬಟ್ಟೆ ಅಂಗಡಿಯ ಟ್ರಯಲ್ ರೂಂನಲ್ಲಿ ಕ್ಯಾಮೆರಾ ಅಳವಡಿಸಿದ್ದ ಮಹಿಳೆ ಮತ್ತು ಆಕೆಯ ಸಹಚರರನ್ನು ಇದೀಗ ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ತಿರುಕೋಯಿಲೂರಿನಲ್ಲಿರುವ ಜನಪ್ರಿಯ ಬಟ್ಟೆ ಅಂಗಡಿಯ ಟ್ರಯಲ್ ರೂಂನಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಇರಿಸಿದ್ದಕ್ಕಾಗಿ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ: ಜೂನ್ 26 ರಂದು ಗ್ರಾಹಕರೊಬ್ಬರು ಬಟ್ಟೆ ಅಂಗಡಿಗೆ ಹೋಗಿದ್ದ ವೇಳೆ ತಮಗೆ ಸರಿಯಾದ ಅಳತೆ ಹೊಂದುವ ಶರ್ಟ್​​ ಅನ್ನು ಧರಿಸಲು  ಟ್ರಯಲ್ ರೊಂಗೆ ಹೋಗಿದ್ದಾರೆ. ಈ ವೇಳೆ ರೂಮ್‌ನಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಇರುವುದು ಅವರ ಕಣ್ಣಿಗೆ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಗ್ರಾಹಕ ಈ ಬಗ್ಗೆ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆ ಬಗ್ಗೆ ಬಟ್ಟೆ ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಇಬ್ಬರು ವ್ಯಕ್ತಿಗಳು ಟ್ರಯಲ್ ರೂಂನೊಳಗೆ ಮೊಬೈಲ್ ಕ್ಯಾಮೆರಾವನ್ನು ಇಟ್ಟು ಆಪರೇಟ್ ಮಾಡಿರುವುದು ತಿಳಿದುಬಂದಿದೆ. ತಕ್ಷಣವೇ ಓರ್ವ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಕೆಲಸ ಮಾಡಲು ಸಹಕರಿಸಿದ ತನ್ನ ಸಹೋದರಿಯ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಶೀಘ್ರವೇ ಪೊಲೀಸರು  ಮಹಿಳೆಯೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).