ನ್ಯೂಸ್

ಮತ್ತೆ ಏರಿತು ಪೆಟ್ರೋಲ್​​ ಬೆಲೆ: ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ

ನವದೆಹಲಿ: ಅಂತರರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಉಂಟಾದ ಏರಿಕೆಯ ಹಿನ್ನೆಲೆಯಲ್ಲಿ ಇಂದು ಮತ್ತೆ ಭಾರತದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳನ್ನು ಹೆಚ್ಚಿಸಲಾಗಿದೆ. ಎರಡು ದಿನಗಳ ಯಥಾಸ್ಥಿತಿಯ ನಂತರ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 106.19 ರೂಪಾಯಿ ಆಯಿತು; ಡೀಸೆಲ್ ಬೆಲೆ ಲೀಟರ್​ಗೆ 94.92 ರೂ. ಆಯಿತು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 36 ಪೈಸೆ ಏರಿಕೆಯೊಂದಿಗೆ ಇಂದಿನ ಪೆಟ್ರೋಲ್​ ಬೆಲೆ 109.89 ರೂಪಾಯಿ ಆಗಿದ್ದರೆ, ಡೀಸೆಲ್​ ಬೆಲೆ 38 ಪೈಸೆ ಏರಿಕೆಯೊಂದಿಗೆ 100.75 ರೂ. ತಲುಪಿದೆ. ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈನಲ್ಲಿ ಪೆಟ್ರೋಲ್​ ದರ ಲೀಟರ್​ಗೆ 112.11 ರೂ. ಮತ್ತು ಡೀಸೆಲ್​ ದರ ಲೀಟರ್​ಗೆ 102.89 ರೂ.ಗಳಷ್ಟಾಗಿದೆ. (ಏಜೆನ್ಸೀಸ್)