ನ್ಯೂಸ್

ಪೆರಿಯಾರ್ ತಮಿಳುನಾಡಿನ ಸುಧಾರಕರಲ್ಲ: ಟಿಎಂಎಂಕೆ ಮುಖಂಡ ಜಾನ್​ ಪಾಂಡಿಯನ್​ | Periyar

ತಮಿಳುನಾಡು: ಪೆರಿಯಾರ್(Periyar) ತಮಿಳುನಾಡಿನ ಸುಧಾರಕರಲ್ಲ, ಅವರನ್ನು ವೋಟ್​ ಬ್ಯಾಂಕ್​​ಗಾಗಿ ಸುಧಾರಕರು ಎಂದು ಬಿಂಬಿಸಲಾಗಿದೆ ಎಂದು ತಮಿಳಿಗ ಮಕ್ಕಳ್​ ಮುನ್ನೇತ್ರ ಕಳಗಂ(ಟಿಎಂಎಂಕೆ) ಮುಖಂಡ ಮಂಗಳವಾರ ಹೇಳಿದ್ದಾರೆ.

ಪೆರಿಯಾರ್ ಅವರನ್ನು ದೊಡ್ಡ ವ್ಯಕ್ತಿ ಎಂದು ಬಿಂಬಿಸುತ್ತಿದ್ದಾರೆ, ಆದ್ದರಿಂದ ಅವರ ಹೆಸರಿನಲ್ಲಿ ಮತಗಳನ್ನು ಪಡೆಯುತ್ತಾರೆ. ಅವರು (ಪೆರಿಯಾರ್) ಏನನ್ನೂ ಸಾಧಿಸಿಲ್ಲ, ಅವರು ಅಸ್ಪೃಶ್ಯತೆಯನ್ನು ತೊಡೆದುಹಾಕಿದರು ಎಂದು ಅವರು ಹೇಳುತ್ತಾರೆ. ಅಸ್ಪೃಶ್ಯತೆ ಇಂದಿಗೂ ಇದೆ. ಆದ್ದರಿಂದ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಪೆರಿಯಾರ್ ತಮಿಳುನಾಡಿನ ಸುಧಾರಕರಲ್ಲ ಎಂದು ಈರೋಡ್​ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಲ ಬದಲಾಗಿದ್ದರಿಂದ ಜನರು ಬಂಡಾಯವೆದ್ದಿತು ಬಳಿಕ ಅಸ್ಪೃಶ್ಯತೆ ತಾನಾಗಿಯೇ ಕೊನೆಯಾಗತೊಡಗಿತು. ಪೆರಿಯಾರ್ ಆಗಮನದಿಂದ ಏನೂ ಆಗಲಿಲ್ಲ. ಇಂದಿಗೂ ರಾಮನಾಥಪುರಂ, ಶಿವಗಂಗೈ, ತಿರುವಾರೂರು ಮುಂತಾದ ಕಡೆ ಅಸ್ಪೃಶ್ಯತೆ ಇದೆ. ಪೆರಿಯಾರ್ ಅವರ ಉತ್ತರಾಧಿಕಾರಿಗಳು ಎಂದು ಹೇಳಿಕೊಳ್ಳುವವರು ಅಸ್ಪೃಶ್ಯತೆ ಪೀಡಿತ ಪ್ರದೇಶಗಳಿಗೆ ಹೋಗಿ ಅದನ್ನು ಕೊನೆಗೊಳಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡಿನ ನ್ಯಾಯಾಧೀಶರು ಜಾತಿ ಆಧಾರದ ಮೇಲೆ ತೀರ್ಪು ನೀಡುತ್ತಾರೆ ಎಂದು ಪಾಂಡಿಯನ್ ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ, ಎಲ್ಲಾ ಕೆಳ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳಲ್ಲಿ ನನಗೆ ಜಾತಿ ಆಧಾರದ ಮೇಲೆ ತೀರ್ಪು ನೀಡಲಾಯಿತು. ನ್ಯಾಯಾಲಯವೇ ತನಿಖೆ ನಡೆಸುವ ಪ್ರಕರಣಗಳನ್ನೂ ಜಾತಿ ಆಧಾರದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಜಾನ್​ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿವೆ. (ಏಜೆನ್ಸೀಸ್​)