ನ್ಯೂಸ್

ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

ನವದೆಹಲಿ: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಹಿರಿಯ ನಾಗರಿಕರು ಐಟಿ ರಿಟರ್ನ್ಸ್​ ಸಲ್ಲಿಸುವಂತಿಲ್ಲ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

75 ವರ್ಷ ಮತ್ತು ಮೇಲ್ಪಟ್ಟ ನಮ್ಮ ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ನಾವು ಕಡಿಮೆಗೊಳಿಸುತ್ತೇವೆ. ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

ತೆರಿಗೆ ಸಂಬಂಧಿಸಿದ ಪ್ರಮುಖಾಂಶಗಳು ಹೀಗಿವೆ...

* ತೆರಿಗೆ ದರ & ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ

* 75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ಇಲ್ಲ

* ಪಿಂಚಣಿ- ಠೇವಣಿ ಮೇಲೆ ಬಡ್ಡಿ ಪಡಿಯೋರಿಗೆ ವಿನಾಯ್ತಿ

* ಕಾರ್ಪೋರೇಟ್ ತೆರಿಗೆ ದರ ಇಳಿಕೆ

* ತೆರಿಗೆ ಆಡಿಟ್‌ ಮಿತಿ 10 ಕೋಟಿ ರೂ.ಗೆ ಏರಿಕೆ

* ಎನ್ಆರ್‌ಐಗಳಿಗೆ ದ್ವಿತೆರಿಗೆ ಇಲ್ಲ

* ಆಡಿಟ್‌ನಲ್ಲಿ ಎನ್‌ಆರ್‌ಐಗಳಿಗೆ ವಿನಾಯ್ತಿ

* ತೆರಿಗೆ ವಂಚನೆ ಮಾಡುವವರ ಪತ್ತೆಗೆ ತಂತ್ರಜ್ಞಾನ ಬಳಕೆ

* ತೆರಿಗೆ ವ್ಯಾಜ್ಯ ಇತ್ಯರ್ಥಕ್ಕೆ ಖುದ್ದು ಟ್ರಿಬ್ಯುನಲ್ ಬ್ಯುರೋಗೆ ಹೋಗುವಂತಿಲ್ಲ